

ಸಂಡೂರು: ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದೆ. ಹಾಕಿ ಕ್ರೀಡೆ ಮೂಲಕ ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸಿದ ಹೆಗ್ಗುರುತಿನ ದ್ಯೋತಕವಾಗಿದೆ ಎಂದು ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಶಿವರಾಮ್ ರಾಗಿ ಹೇಳಿದರು.
ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಕ್ರೀಡಾ ದಿನಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು. 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತ ಹ್ಯಾಟ್ರಿಕ್ ಗೆಲುವಿನಲ್ಲಿ ಧ್ಯಾನಚಂದ್ ಅವರ ಪಾತ್ರ ಮಹತ್ವದ್ದಾಗಿತ್ತು.ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 185 ಪಂದ್ಯಗಳಲ್ಲಿ 570 ಗೋಲುಗಳನ್ನು ಗಳಿಸಿದ್ದರು. 1956ರಲ್ಲಿ ಭಾರತ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಿದೆ. ಅವರ ಸಾಧನೆ ಮತ್ತು ಕ್ರೀಡಾಮನೋಭಾವ, ಆದರ್ಶ ಗುಣಗಳು ಯುವಕರು ಮತ್ತು ಕ್ರೀಡಾಪಟುಗಳಿಗೆ ಮಾದರಿಯಾಗಿವೆ ಎಂದರು.
ಉಪನ್ಯಾಸಕರಾದ ಡಾ.ಶರತ್ ಕುಮಾರ್, ಡಾ.ಹೊನ್ನೂರ್‌ಸ್ವಾಮಿ, ಡಾ.ಗುಡ್ಡಪ್ಪ, ಡಾ.ಕೆ.ಜಿ.ಸುಮಾ, ಡಾ.ಮುಬಾರಕ್, ಶಂಕರ ದಳವಾಯಿ, ಜರ್ಮಲಿ ನಾಗರಾಜ, ಸತೀಶ್, ರಮೇಶ್ ರಾಯಚೂರ್, ಜಿ.ಶಿವಕುಮಾರ್, ಡಾ. ವಸಂತ್‌ಪಾಟೀಲ್, ಕಿರಣ್‌ಕುಮಾರ್, ವಿರೂಪಾಕ್ಷಪ್ಪ, ಕ್ರೀಡಾ ಸಹಾಯಕ ಕೆ.ಪಾಪಯ್ಯ ಇತರರಿದ್ದರು.