ಪ್ರಿಯಕರನನ್ನು ಭೀಕರವಾಗಿ ಕೊಲೆ ಮಾಡಿದ್ದ ಹಂತಕಿ ಪೊಲೀಸ್ ಬಲೆಗೆ

ballri murder 2
Published on

ಬಳ್ಳಾರಿ: ಸಂಡೂರನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ

ಸಂಡೂರು ತಾಲೂಕಿನ ತೋರಣಗಲ್ಲಿನ‌ ಬಾಬಾ ನಗರದ ಮನೆಯೊಂದರಲ್ಲಿ ಮಾರ್ಚ್ 16 ರಿಂದ 20 ರ ನಡುವೆ ಪ್ರಿಯಕರನನ್ನ ಬರ್ಬರವಾಗಿ ಕೊಲೆಗೈದಿರುವ ಆರೋಪದ ಅಡಿಯಲ್ಲಿ ಅಂತಾರಾಜ್ಯ‌ ಮೂಲದ ಇಬ್ಬರನ್ನು ಬಳ್ಳಾರಿ ಜಿಲ್ಲೆಯ ಪೊಲೀಸರು‌ ಭಾನುವಾರ ಬಂಧಿಸಿದ್ದಾರೆ.

ವೆಸ್ಟ್ ಬಂಗಾಳ ಮೂಲದ ಆಶಿಶ್ ಡೇ‌ (28) ಎಂಬಾತನ ಕೊಲೆ ಕಳೆದ ತಿಂಗಳು ನಡೆದಿತ್ತು. ಕೊಲೆ ನಡೆದ ಸ್ಥಳದಲ್ಲಿ ಆಶಿಶ್​ನ ರುಂಡ, ಮುಂಡ ಬೇರೆ ಬೇರೆಯಾಗಿತ್ತು. ಕೊಲೆಗೈದಿದ್ದ ಆರೋಪದ ಅಡಿಯಲ್ಲಿ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಸ್ಪರಿ ಗ್ರಾಮದ ಮಧುಸೂದನ್ (22) ಹಾಗೂ ತ್ರಿಪುರಾ ರಾಜ್ಯದ ಅಗರ್ತಲಾ ಜಿಲ್ಲೆಯ ರಾಮನಗರದ ನಿವಾಸಿ ದೇವಿಕಾ ಅಲಿಯಾಸ್ ದೇವಿಕಾ ಶರ್ಮಾ (27) ಅವರನ್ನ ತೋರಣಗಲ್ಲಿನ ಪೊಲೀಸರು ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net