

ಸಂಡೂರು: ಇಲ್ಲಿನ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ ಎಸ್.ಸಿರಾಜ್ ಹಾಗೂ ಎಂ.ಸಿ.ಲತಾ ಉಜ್ಜಪ್ಪ ಆಯ್ಕೆಯಾದರು.
ಒಬಿಸಿ (ಎ)ಗೆ ಮೀಸಲಾದ ಅಧ್ಯಕ್ಷ ಸ್ಥಾಕ್ಕೆ ಕಾಂಗ್ರೆಸ್‌ನ ಎಸ್.ಸಿರಾಜ್ ಹಾಗೂ ಬಿಜೆಪಿಯ ದುರುಗಮ್ಮ ರಮೇಶ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಎಂ.ಸಿ.ಲತಾ ಉಜ್ಜಪ್ಪ ಹಾಗೂ ಬಿಜೆಪಿಯ ಕೊಂಚಿಗೇರಿ ಹರೀಶ್ ಸ್ಪರ್ಧಿಸಿದ್ದರು.
ಎಸ್.ಸಿರಾಜ್ ಹಾಗೂ ಎಂ.ಸಿ.ಲತಾ ಅವರು ಸಂಸದ ಈ.ತುಕಾರಾಮ್ ವೋಟ್ ಸೇರಿ ತಲಾ 13 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಇಬ್ಬರು ತಲಾ ಒಂಬತ್ತು ವೋಟ್ ಪಡೆದು ಪರಾಭವಗೊಂಡರು. ಬಿಜೆಪಿ ಸದಸ್ಯ ಮಾಳಿಗಿ ರಾಮಣ್ಣ ಗೈರಾಗಿದ್ದರೆ, ಪಕ್ಷೇತರ ಸದಸ್ಯ ಎತಿಪ್ಪಮ್ಮ ತಡವಾಗಿ ಬಂದ ಕಾರಣ ಹೊರಗೆ ನಿಲ್ಲಬೇಕಾಯಿತು.
ತಹಸೀಲ್ದಾರ್ ಅನಿಲ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ, ಕಾಂಗ್ರೆಸ್‌ನ ಪ್ರಮುಖರಾದ ಆಶಾಲತಾ ಸೋಮಪ್ಪ, ಚಿತ್ರಿಕಿ ಸತೀಶ್ ಕುಮಾರ್, ಜಿ.ಏಕಾಂಬ್ರಪ್ಪ, ವಿಶ್ವಾಸ್‌ಲಾಡ್, ರೋಷನ್ ಜಮೀರ್, ಎಂ.ಶಿವಲಿಂಗಪ್ಪ, ಚಂದ್ರಾನಾಯ್ಕ, ಜನಾರ್ದನ, ಅನಿತಾ ವಸಂತಕುಮಾರ್, ಎಲ್.ಎಚ್.ಶಿವಕುಮಾರ್, ವೀರೇಶ್ ಸಿಂಧೆ, ನಬೀಸಾಬ್, ಪರಶುರಾಮ್, ತಿಪ್ಪೇಸ್ವಾಮಿ ಇತರರಿದ್ದರು.