ಒಂದೇ ಬೆಳೆ ನೆಚ್ಚಿಕೊಳ್ಳದೆ ಬೇಸಾಯ ಮಾಡಿ

Sandur formars day
ಸಂಡೂರಿನಲ್ಲಿ ಸೋಮವಾರ ರೈತ ದಿನಾಚರಣೆಯಲ್ಲಿ ಪ್ರಗತಿಪರ ಕೃಷಿಕರನ್ನು ಗೌರವಿಸಲಾಯಿತು. ಶಾಸಕಿ ಅನ್ನಪೂರ್ಣ ತುಕಾರಾಮ್, ಎಡಿಎ ಮಂಜುನಾಥರೆಡ್ಡಿ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್, ಕೃಷಿಕ ಸಮಾಜದ ಅಧ್ಯಕ್ಷ ಕೆ.ಜಾಫರ್ ಸಾಬ್ ಇದ್ದರು.
Published on

ಸಂಡೂರು : ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಸ್ವತಃ ಕೃಷಿಕರಾಗಿದ್ದು, ಜಮೀನ್ದಾರ್ ಪದ್ಧತಿಯನ್ನು ರದ್ದುಪಡಿಸಿ ಭೂ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದೆ ಬರಲು ಸಹಕರಿಸಿದರು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ರೈತ ದಿನಾಚರಣೆ, ಕಿಸಾನ್ ಗೋಷ್ಠಿ ಆತ್ಮಯೋಜನೆ ಯಡಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಬೆಳಗಾವಿ ಅಧಿವೇಶನದಲ್ಲಿ ಬಹಳ ಕಡಿಮೆ ಸಮಯ ಕೊಟ್ಟಿದ್ದರಿಂದ ರೈತರ ಬಗ್ಗೆ ಮಾತನಾಡಲಾಗಲಿಲ್ಲ. ಮುಂದಿನ ದಿನಗಳಲ್ಲಿ ರೈತ ಸಮಸ್ಯೆಗಳ ಕುರಿತು ಮಾತನಾಡುವೆ. ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಮಿಶ್ರಬೆಳೆ ಮತ್ತು ಸಾವಯವ ರೂಢಿಸಿಕೊಳ್ಳಬೇಕು ಎಂದರು. ಕಿಸಾನ್ ಸನ್ಮಾನ್ ಪಡೆದ ರೈತ ದುರುಗಪ್ಪ ಬಂಡ್ರಿ ಮಾತನಾಡಿ, ಭೂಮಿತಾಯಿಗೆ ವಿಷವುಣಿಸಿ, ಅದನ್ನು ಬೆಳೆಗಳ ಮೂಲಕ ನಾವೂ ಉಣ್ಣುವ ಮೂಲಕ ಸಾಯುತ್ತಿದ್ದೇವೆ. ಸಾವಯವ ಕೃಷಿ ಪದ್ಧತಿ ಬಳಸಿ. ರಾಸಾಯನಿಕ ಗೊಬ್ಬರ ಬಳಸದೆ ಎರೆ ಹುಳು ಗೊಬ್ಬರ ಬಳಸಿ ಎಂದು ಸಲಹೆ ನೀಡಿದರು.

ಹಗರಿ ಕೃಷಿ ವಿಜ್ಞಾನ ಕೆಂದ್ರದ ಮುಖ್ಯಸ್ಥ ಡಾ.ಗೋವಿಂದಪ್ಪ, ಹಗರಿ ಕೃಷಿ ವಿಜ್ಞಾನಿ ಡಾ.ರವಿಕುಮಾರ್ ರೈತರೊಂದಿಗೆ ಸಂವಾದ ಮಾಡಿದರು. ಎಡಿಎ ಮಂಜುನಾಥರೆಡ್ಡಿ, ಬಿಸಿಯೂಟ ಎಡಿ ಶ್ರೀಧರಮೂರ್ತಿ, ರೈತ ಸಂಪರ್ಕ ಕೇಂದ್ರಗಳ ಎಒಗಳಾದ ರಾಘವೇಂದ್ರ, ಸಂತೋಷ್ ಕುಮಾರ್, ಪುರಸಭೆ ಅಧ್ಯಕ್ಷ ಎಸ್.ಸಿರಾಜ್, ಕೃಷಿಕ ಸಮಾಜದ ಅಧ್ಯಕ್ಷ ಕೆ.ಜಾಫರ್ ಸಾಬ್, ಉಪಾಧ್ಯಕ್ಷ ಮರಿ ಚಿತ್ತಪ್ಪ, ಖಜಾಂಚಿ ಚಿತ್ತಪ್ಪ, ಜಿಲ್ಲಾ ಪ್ರತಿನಿಧಿ ಎಸ್.ಕೆ.ವಿಶಾಲಾಕ್ಷಿ, ಸದಸ್ಯರಾದ ಕೆ.ಸಕ್ರಪ್ಪ, ಬೊಮ್ಮಪ್ಪ, ಎಸ್.ಹುಸೇನ್ ಪೀರಾ, ಆರ್.ಮಂಜುನಾಥ, ಚಿಕ್ಕಣ್ಣ, ಎನ್.ಅಮರೇಶ್, ಜಿ.ಆನಂದ, ದೊಡ್ಡಪ್ಪ, ಕಿವುಡ ಬೊಮ್ಮಪ್ಪ, ಬಣಕಾರ ನಾಗರಾಜ, ರಾಮಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net