ಎಂ.ತುಂಬರಗುದ್ದಿಯಲ್ಲಿ ಊರಮ್ಮನ ರಥೋತ್ಸವ

SanduruP1
ಸಂಡೂರು ತಾಲೂಕಿನ ಎಂ.ತುಂಬರಗುದ್ದಿಯಲ್ಲಿ ಊರಮ್ಮನ ಜಾತ್ರೆ ನಿಮಿತ್ತ ಗ್ರಾಮಕ್ಕೆ ಸಂಸದ ಈ.ತುಕಾರಾಮ್ ಭೇಟಿ ನೀಡಿದರು. ಗ್ರಾಪಂ ಸದಸ್ಯ ನಾಗರಾಜ, ಪ್ರಮುಖರಾದ ನಾಗೇಶ ಪಾಟೀಲ್, ಪಂಪಾಪತಿ, ಶಿವಪ್ಪ, ಹುಲುಗಪ್ಪ, ಅಲಿಬಾಷಾ, ಮಾಬುಸಾಬ, ಮಾಸಿಂಸಾಬ, ವಲಿಸಾಬ ಇತರರಿದ್ದರು.
Published on

ಸಂಡೂರು: ಎಂ.ತುಂಬರಗುದ್ದಿ ಗ್ರಾಮದಲ್ಲಿ ಊರಮ್ಮನ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಗಂಗಾಪೂಜೆ, ಬುಧವಾರ ದೇವಿ ದರ್ಶನ, ಸೇವಾ ಕಾರ್ಯಗಳು ಹಾಗೂ ಗುರುವಾರ ರಥೋತ್ಸವ ಜರುಗಲಿದೆ.

ಬುಧವಾರ ದೇವಿಯ ದರ್ಶನ ಪಡೆದ ಸಂಸದ ಈ.ತುಕಾರಾಮ್, ಗ್ರಾಮದ ಈಶ್ವರ ದೇವಸ್ಥಾನ ನಿರ್ಮಾಣ, ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ಶಾದಿ ಮಹಲ್ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕೂ ಯೋಜನೆ ರೂಪಿಸಿ ಅನುದಾನ ನೀಡಲಾಗುವುದು. ಇದು ನನ್ನ ಹುಟ್ಟಿದ ಊರು ಗ್ರಾಮದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಜಾತ್ರೋತ್ಸವವನ್ನು ಆಚರಿಸಿ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net