ಚಿರತೆಯ ಮರಿ ಬೋನಿಗೆ

02022023 sandur leopad captured
Published on

ಸಂಡೂರು: ತಾಲೂಕಿನ ತೋರಣಗಲ್ ಹೋಬಳಿ ಕುರೆಕುಪ್ಪದ ಸುಂಕ್ಲಮ್ಮ ದೇವಸ್ಥಾನದ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಮರಿ ಚಿರತೆ ಬಿದ್ದಿದೆ. ಕೆಲ ದಿನಗಳ ಹಿಂದೆಯಷ್ಟೆ ಪಟ್ಟಣದ ಕುರಿಗಾಹಿ ಸೋಮಪ್ಪ ಮನೆಯ ಅವರಣದಲ್ಲಿದ್ದ ಮೇಕೆಗಳ ಮೇಲೆ ಚರಿತೆಗಳು ದಾಳಿ ನಡೆಸಿ, ಒಂದು ಮೇಕೆ ಮೃತಪಟ್ಟು ಮತ್ತೊಂದು ಗಂಭೀರವಾಗಿ ಗಾಯಗೊಂಡಿತ್ತು. ಸೆರೆಸಿಕ್ಕ ಚಿರತೆಯ ಮರಿಯನ್ನು ಮೈಸೂರಿನ ಕಾಡಿಗೆ ರವಾನಿಸಲಾಗಿದೆ. ಉಳಿದ ಎರಡು ಚಿರತೆಯ ಸೆರೆಗೆ ಬೋನನ್ನು ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net