

ಸಂಡೂರು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಕೃಷ್ಣಾನಗರ ಗ್ರಾಪಂ ಅಧ್ಯಕ್ಷೆ ರೇಣುಕಾ ದೇವೇಂದ್ರಪ್ಪ ಹೇಳಿದರು.
ತಾಲೂಕಿನ ದೌಲತ್‌ಪುರ ಶಾದಿಮಹಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರು ತಿಂಗಳಿಗೊಮ್ಮೆಯಾದರೂ ಬಿಪಿ, ಶುಗರ್ ತಪಾಸಣೆ ಮಾಡಿಸಬೇಕು. ಎಲ್ಲರೂ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದರು.
ನರ್ಸ್ ಸುನಿತಾ ಮಾತನಾಡಿ, ಗರ್ಭಿಣಿ ಮಹಿಳೆಯರು ಪ್ರತಿ ದಿನ ಪೌಷ್ಟಿಕಾಂಶ ಆಹಾರ ಸೇವಿಸಬೇಕು. ಆಯುಷ್ಮಾನ್ ಭವ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಸದಸ್ಯರಾದ ಆಫಿಯಾ, ಇಸ್ಮಾಯಿಲ್, ಪರಸಪ್ಪ, ಸಿಎಚ್‌ಒ ದೀಪಾ, ನಂದಿನಿ, ಬಷೀರ್, ಕೆಎಚ್‌ಪಿಟಿಯ ಗೀತಾ, ಪ್ರಮುಖರಾದ ಪಿ.ಜಯಣ್ಣ, ದೇವೇಂದ್ರಪ್ಪ, ತಾಯಪ್ಪ, ಶರ್ಮಾಸ್ ಸಾಬ್, ಬಿ.ಖಾಸೀಂಸಾಬ್ ಇದ್ದರು.