ಇದು ದರಿದ್ರ ಸರ್ಕಾರ

MLA KRISHNANAIK
Published on

ಸಂಡೂರು: ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷದಿಂದ ಯಾವ ಕ್ಷೇತ್ರದ ಶಾಸಕರಿಗೆ ಒಂದು ರುಪಾಯಿ ಅನುದಾನ ಬಂದಿಲ್ಲ ಎಂದು ಶಾಸಕ ಕೃಷ್ಣ ನಾಯ್ಕ ಹೇಳಿದರು.

ತಾಲೂಕಿನ ಚೋರನೂರಿನಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಭಾನುವಾರ ನಡೆದ  ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದರು.

ನಿರಂತರ ಮಳೆಗೆ ಸಾಕೊಷ್ಟು ಹಾನಿಯಾದರೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ಎಲ್ಲಿವರೆಗೂ ಈ ದರಿದ್ರ ಸರ್ಕಾರ ಇರುತ್ತೋ ಅಲ್ಲಿವರೆಗೂ ನಾವು, ನಮ್ಮ ಮಕ್ಕಳು ಉದ್ದಾರ ಆಗಲ್ಲ. ಆದಷ್ಟು ಬೇಕು ಈ ದರಿದ್ರ ಸರ್ಕಾರ ಕಿತ್ತುಹೊಗಿಬೇಕು. ಈ ಚುನಾವಣೆಯಿಂದಲೇ ಆ ಕೆಲಸ ಆಗಲಿ, ಸಂಡೂರಲ್ಲಿ ಬಿಜೆಪಿ ಗೆಲ್ಲಿಸಿ. ಒಂದು ಸಾರಿ ಸಂಡೂರಿನಲ್ಲಿ ಬದಲಾವಣೆ ಮಾಡಿ ಬಿಜೆಪಿ ಗೆಲ್ಲಿಸಿ, ಆಗ ಬದಲಾವಣೆ ನೀವೆ ನೋಡಿ ಎಂದು  ಮನವಿ ಮಾಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net