ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ 35 ಪದಕ

Sandur Karate
ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೆದ್ದ ಪದಕ-ಪ್ರಮಾಣ ಪತ್ರದೊಂದಿಗೆ ಸಂಡೂರು ತಾಲೂಕು ಕೃಷ್ಣಾನಗರ ಬಳಿಯ ಬಿಕೆಜಿ ಶಾಲೆ ವಿದ್ಯಾರ್ಥಿಗಳು. ತರಬೇತುದಾರರಾದ ಯು.ಪ್ರವೀಣ್, ಪಿಇ ಶಿಕ್ಷಕಿ ಪಾಲಮ್ಮ, ವಾರ್ಡನ್ ನವೀನ್ ಇದ್ದಾರೆ.
Published on

ಸಂಡೂರು: ಶಿವಮೊಗ್ಗದಲ್ಲಿ ಆ.24-25ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಿಕೆಜಿ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕುಮತೆ-ಕಾಥಾ ವಿಭಾಗದಲ್ಲಿ 5 ಚಿನ್ನ, 12 ಬೆಳ್ಳಿ ಮತ್ತು 18 ಕಂಚು ಸೇರಿ ಒಟ್ಟು 35 ಪದಕಗಳನ್ನು ಗೆದ್ದಿದ್ದಾರೆ.

ಕುಮತೆ ವಿಭಾಗದಲ್ಲಿ ರಿಯಾಜ್, ಉಸ್ಮಾನ್, ಶರತ್ ಮತ್ತು ಸಮೃದ್ಧಿಗೆ ಬೆಳ್ಳಿ, ಅಭಿಲಾಷಾ, ಮಧುಸೂದನ್, ಜಿತೇಂದರ್, ಪ್ರಜ್ವಲ್ ಹಾಗೂ ರಾಮ್ ಚರಣ್ ಕಂಚು ಪಡೆದರೆ, ಕಥಾ ವಿಭಾಗದಲ್ಲಿ ಗಣೇಶ್, ಪೂರ್ವಿ, ಸಾಯಿ ಸೃಜನ್, ಉಸ್ಮಾನ್ ಹಾಗೂ ಪ್ರಜ್ವಲ್‌ಗೆ ಚಿನ್ನ ಹಾಗೂ ನಂದಿನಿ, ಅಭಿಲಾಷಾ, ಅಭಿಷೇಕ್, ಅಮೋಘವರ್ಷ, ಅವಿನಾಶ್, ದರ್ಶನ್, ಅಭಿರಾಮ್ ಮತ್ತು ಶರತ್ ಬೆಳ್ಳಿ ಹಾಗೂ ಮಾನಸ, ರಿಯಾಜ್, ಲಾವಣ್ಯ, ಸಮೃದ್ಧಿ, ಸೌಂದರ್ಯ, ಅಂಕುಶ್, ರಿಷಿ, ಮಧುಸೂದನ್, ಜಿತೇಂದ್ರ, ತರುಣ್, ಶಿವಕುಮಾರ್, ಲೋಹಿತ್ ಮತ್ತು ರಾಮ್ ಚರಣ್ ಬೆಳ್ಳಿ ಪದಕ ಗೆದ್ದಿದ್ದಾರೆ.

ವಿದ್ಯಾರ್ಥಿಗಳ ಸಾಧನೆ ಹಾಗೂ ತರಬೇತುದಾರರಾದ ಯು.ಪ್ರವೀಣ್, ಪಿಇ ಶಿಕ್ಷಕಿ ಪಾಲಮ್ಮ, ವಾರ್ಡನ್ ನವೀನ್ ಕಾರ್ಯಕ್ಕೆ ಶಾಲಾಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net