ತಾಳೂರಿನಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಿ

Sandur Manavi
ತಾಳೂರು ಗ್ರಾಪಂ ಪಿಡಿಒ ಪಕ್ಕೀರಪ್ಪಗೆ ಡಿವೈಎಫ್‌ಐನಿಂದ ಮನವಿ ಸಲ್ಲಿಸಲಾಯಿತು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲೂಬಾ, ತಾಲೂಕು ಅಧ್ಯಕ್ಷ ಷರೀಪ್, ಮುಖಂಡರಾದ ಪಂಪಾಪತಿ, ಚಂದ್ರಶೇಖರ್, ಕರಿಯಪ್ಪ, ಆಲಂಬಾಷಾ ಇತರರಿದ್ದರು.
Published on

ಸಂಡೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ತಾಳೂರು ಗ್ರಾಮದ ಜನರು ಗ್ರಾಪಂ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲೂಬಾ ಮಾತನಾಡಿ, ಕುಡಿವ ನೀರಿನ ಸಮಸ್ಯೆ ನಿವಾರಿಸಬೇಕು. ಪ್ರತಿ ಏರಿಯಾದಲ್ಲಿ ಅಗತ್ಯ ನಳಗಳನ್ನು ಅವಳಡಿಸಬೇಕು. ಬೀದಿದೀಪಗಳನ್ನು ಸರಿಪಡಿಸಬೇಕು. ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಮೇಲೆ ಗಮನಹರಿಸಬೇಕು. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದ ಗ್ರಾಪಂ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಳಿ ಸ್ಪೀಡ್ ಬ್ರೇಕರ್ಸ್‌ ಹಾಕಿ ಬಿಳಿ ಬಣ್ಣದ ಪೇಂಟ್ ಬಳಿಯಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಶಿಕ್ಷಕರನ್ನು ನೇಮಿಸಬೇಕು. ಎಸ್ಸಿ, ಎಸ್ಟಿ ಜನರಿಗೆ ಧನಸಹಾಯ ಒದಗಿಸಬೇಕು, ಗ್ರಾಮದ 3 ಮತ್ತು 4ನೇ ವಾರ್ಡ್‌ನಲ್ಲಿ ಆರ್‌ಒ ಪ್ಲಾಂಟ್ ನಿರ್ಮಿಸಬೇಕು. ನಿವೇಶನ, ವಸತಿ ರಹಿತರಿಗೆ ಜಾಗ, ಮನೆಗಳನ್ನು ಮಂಜೂರು ಮಾಡಬೇಕು. ಮಹಿಳಾ ಶೌಚಗೃಹ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಬೇಕು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಷರೀಫ್, ಮುಖಂಡರಾದ ಪಂಪಾಪತಿ, ಚಂದ್ರಶೇಖರ್, ಕರಿಯಪ್ಪ, ಆಲಂಬಾಷಾ, ಜಿಲಾನ್ ಬಾಷಾ, ರವಿಚಂದ್ರ, ಅಜ್ಜಯ್ಯ, ಅಂಜಿ, ತಿಪ್ಪೇಸ್ವಾಮಿ, ಅಂಬರೀಷ್, ಶರಣ, ರುದ್ರಪ್ಪ, ಕನಕಪ್ಪ, ಕರಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net