

ಸಂಡೂರು: ತಾಲೂಕಿನ ಚೋರನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯದ ಅಂತರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕೇಂದ್ರದ ತಪಾಸಣಾ ಕೊಠಡಿ, ಚುಚ್ಚುಮದ್ದು ಕೊಠಡಿ, ಲ್ಯಾಬ್, ವಾರ್ಡ್ ಮತ್ತು ಶೌಚಗೃಹ ಹಾಗೂ ಆಸ್ಪತ್ರೆಯ ಆವರಣದ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ರಾಯಚೂರಿನ ಕಾಯಕಲ್ಪ ಬಾಹ್ಯ ಮೌಲ್ಯಮಾಪನ ಡಾ.ದೌಲಾಸಾಬ್ ಮುದ್ದಾಪುರ್ ಮಾತನಾಡಿ, ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಸಿಬ್ಬಂದಿಗೆ ಕಾಯಕಲ್ಪದ ಉದ್ದೇಶಗಳ ಕುರಿತು ತರಬೇತಿ ನೀಡಬೇಕಾಗಿದೆ. ಕಾಯಕಲ್ಪ ಪ್ರಶಸ್ತಿಯಿಂದ ಆಸ್ಪತ್ರೆಯ ಚಿತ್ರಣ ಬದಲಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.
ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷಯ್ ಶಿವಪುರ, ಕೇಂದ್ರದ ವೈದ್ಯ ಸಂದೀಪ್, ಪವನ್, ಜಯಶ್ರೀ, ನೇತ್ರಾಧಿಕಾರಿ ಈಶ್ವರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಎರ‌್ರಿಸ್ವಾಮಿ ಇನ್ನಿತರರಿದ್ದರು.