ಸಮಾಜ ಸೇವೆಗೆ ಎಲ್ಲರೂ ಸನ್ನದ್ಧರಾಗಿರಲಿ

Sandur bkg induction ceremony
ಕೃಷ್ಣಾನಗರದ ಬಳಿಯ ಬಿಕೆಜಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಪದಗ್ರಹಣ ಸಮಾರಂಭ ನಡೆಯಿತು. ಹೊಸಪೇಟೆ ಉಪವಿಭಾಗದ ಡಿವೈಎಸ್ಪಿ ಡಾ.ಮಂಜುನಾಥ್, ಸಂಸ್ಥೆಗಳ ಸದಸ್ಯೆ ವೀಣಾ ಪಾಟೀಲ್, ಪ್ರಾಚಾರ್ಯ ಕೆ.ವಿ.ಮೋಹನ್ ರಾವ್ ವಿದ್ಯಾರ್ಥಿಗಳಿದ್ದರು.
Published on

ಸಂಡೂರು: ಉತ್ತಮ ನಾಯಕನಾದವನು ಕೇವಲ ತನ್ನನ್ನು ಮಾತ್ರವಲ್ಲ, ಇತರರ ಜೀವನವನ್ನೂ ಅಭಿವೃದ್ಧಿಪಡಿಸುತ್ತಾನೆ ಎಂದು ಡಿವೈಎಸ್ಪಿ ಡಾ.ಮಂಜುನಾಥ್ ಹೇಳಿದರು.

ಸ್ಥಳೀಯ ಬಿಕೆಜಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೋಮವಾರ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಉತ್ತಮ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಲು ಮತ್ತು ಸಮುದಾಯದ ಸೇವೆಗೆ ತಮ್ಮನ್ನು ಮೀಸಲಾಗಿಸಲು ವಿದ್ಯಾರ್ಥಿಗಳು ಸದಾ ಸನ್ನದ್ಧರಾಗಿರಬೇಕು. ನಾಯಕತ್ವವು ಹೇಗೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಸುಧಾರಿಸುತ್ತದೆ ಮತ್ತು ಇತರರನ್ನು ಪ್ರೇರೇಪಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ಬಿಕೆಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯೆ ವೀಣಾ ಪಾಟೀಲ್ ಮಾತನಾಡಿ, ಉತ್ತಮ ನಾಯಕ ಸಮರ್ಪಕವಾದ ಸ್ವಾಂತಂತ್ರ್ಯ, ಸ್ಪಷ್ಟತೆಯುಳ್ಳ ದೃಷ್ಟಿಕೋನ, ಕಾರ್ಯನಿಷ್ಠೆ ಮತ್ತು ಇತರರ ಹಿತಾಸಕ್ತಿ ಹೊಂದಿರಬೇಕು. ಒಳ್ಳೆಯ ನಾಯಕ ನಿರಂತರವಾಗಿ ಕಲಿಯುವ ಮನೋಭಾವನೆ, ಸಹಾನುಭೂತಿ ಮತ್ತು ಸಮಾಜ ಸೇವೆ ಬಗ್ಗೆ ಜಾಗೃತಿಯುಳ್ಳವನಾಗಿರಬೇಕು ಎಂದರು.

ಪ್ರಾಚಾರ್ಯ ಕೆ.ವಿ.ಮೋಹನ್ ರಾವ್ ಕಾರ್ಯಕ್ರಮದ ಮುಖ್ಯ ಉದ್ದೇಶಗಳನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಡಿ.ವೆನ್ನೆಲ್ಲಾ, ಧನ್ಯತಾ, ಸುಪ್ರಜಾ ಮತ್ತು ಸ್ನೇಹಾ, ಸಿಂಚನಾ ವರದ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net