

ಸಂಡೂರು: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಖಾತ್ರಿ ಯೋಜನೆಯಡಿ ಅನುಷ್ಠಾನ ಮಾಡಿದ ಕಾಮಗಾರಿಗಳನ್ನು ಹಾಗೂ ಜೆಜೆಎಂ, ಡಿಎಂಎಫ್ ಕಾರ್ಯಗಳ ಪ್ರಗತಿಯನ್ನು ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಬುಧವಾರ ವೀಕ್ಷಿಸಿದರು.
ಗೊಲ್ಲಲಿಂಗಮ್ಮನಹಳ್ಳಿ ಗ್ರಾಪಂ ನಾಗೇನಹಳ್ಳಿಯಲ್ಲಿ ಜೆಜೆಎಂ ಕಾಮಗಾರಿ ವೀಕ್ಷಿಸಿದ ರಾಹುಲ್ ಸಂಕನೂರು, ವಾಂತಿ-ಭೇದಿ ಪ್ರಕರಣಗಳನ್ನು ಆಲಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆಂಬುಲೆನ್ಸ್ ಇಲ್ಲಿಟ್ಟಿದ್ದೇವೆ ಎಂದು ಪ್ರಭಾರ ಟಿಎಚ್‌ಒ ಡಾ.ಭರತ್ ಕುಮಾರ್ ಹೇಳಿದರು. ಗ್ರಾಮದಲ್ಲಿ ಓಡಾಡಿ ಕುಡಿವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಪರಿಶೀಲಿಸಿದರು. ಯರ‌್ದಮ್ಮನಹಳ್ಳಿಯಲ್ಲಿ ಕಾಮಗಾರಿ, ಸಾಮಾಜಿಕ ಅರಣ್ಯ ಇಲಾಖೆ ನೆಡುತೋಪುಗಳನ್ನು ಪರಿಶೀಲಿಸಿದರು. ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಡುವಂತೆ ಆರ್‌ಎಫ್‌ಒ ಮಾಬ್ಬಾಷಗೆ ಸೂಚಿಸಿದರು. ಬೊಮ್ಮಘಟ್ಟದಲ್ಲಿ ಗ್ರಾಪಂ ಶಾಲಾ ಶೌಚಗೃಹ, ಚೋರುನೂರಿನ ಮಲ ತ್ಯಾಜ್ಯ ನಿರ್ವಹಣಾ ಘಟಕ ಪರಿಶೀಲಿಸಿದರು.
ಹಳೆಯ ವಡ್ಡಿನಕಟ್ಟೆಯಲ್ಲಿ ಶಾಲಾ ಕಾಂಪೌಂಡ್, ಸೋವೇನಹಳ್ಳಿ ಜಿಡಬ್ಲ್ಯೂಎಂ ಕಾಮಗಾರಿ, ಎಚ್.ಕೆ.ಹಳ್ಳಿಯಲ್ಲಿ ಡಿಎಂಎಫ್‌ನಡಿ ನಿರ್ಮಾಣ ಮಾಡಿರುವ ಗ್ರಾಪಂ ನೂತನ ಕಟ್ಟಡ, ಲೈಬ್ರರಿ, ಎಸ್‌ಆರ್‌ಎಸ್ ಹಳ್ಳಿಯಲ್ಲಿ ಪೂರ್ಣಗೊಂಡ ಜಿಡಬ್ಲ್ಯೂಎಂ ಕಾಮಗಾರಿ, ಉತ್ತರಮಲೆಯಲ್ಲಿ ಗ್ರೇವಿ ಯಾರ್ಡ್, ನೀಡಗುರ್ಥಿಯಲ್ಲಿ ಶಾಲಾ ಕಾಂಪೌಂಡ್, ಫೇವರ್ಸ್ ಫುಟ್‌ಫಾತ್ ಇತರ ಕಾಮಗಾರಿಗಳನ್ನು ವೀಕ್ಷಿಸಿದರು.
ತಾಪಂ ಇಒ ಎಚ್.ಷಡಕ್ಷರಯ್ಯ, ಎಡಿಎ ಮಂಜುನಾಥರೆಡ್ಡಿ, ಉದ್ಯೋಗಖಾತ್ರಿ ಎಡಿ ರೇಣುಕಾಚಾರ್ಯ ಸ್ವಾಮಿ, ಪ್ರಭಾರ ಪಿಡಿಒ ಕುಮಾರಸ್ವಾಮಿ, ಯಂಕಪ್ಪ ಮುಂತಾದವರಿದ್ದರು.