ಗಿರೇನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ

Sandru Leopard
ಗಿರೇನಹಳ್ಳಿಯಲ್ಲಿ ಭಾನುವಾರ ರಾತ್ರಿ ಕಾಣಿಸಿಕೊಂಡ ಚಿರತೆ.
Published on

ಸಂಡೂರು: ತಾಲೂಕಿನ ನಿಡಗುರ್ತಿ ಗ್ರಾಪಂ ವ್ಯಾಪ್ತಿ ಗಿರೇನಹಳ್ಳಿಯಲ್ಲಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ.

ಗ್ರಾಮದ ಗ್ರಾಪಂ ಸದಸ್ಯ ಹೊನ್ನೂರಸ್ವಾಮಿ ಅವರ ಕುರಿ ಫಾರ್ಮ್ ಬಳಿ ಭಾನುವಾರ ರಾತ್ರಿ 10.53ರ ಸುಮಾರಿಗೆ ಚಿರತೆ ಬಂದಿದೆ. ಫಾರ್ಮ್‌ಗೆ ಬೀಗ ಹಾಕಿದ್ದರಿಂದ ಪಕ್ಕದಲ್ಲಿ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದೆ. ಅದೂ ಸಹ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದೆ.

ಶಬ್ದವಾಗುತ್ತಲೆ ಅರಣ್ಯದತ್ತ ಓಡಿ ಹೋಗಿದೆ. ಚಿರತೆ ಸೆರೆಗೆ ಬೋನು ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net