ತಂದೆಯ ಹಾದಿ ತುಳಿದಿದ್ದ ಮಗ- ಅಪ್ಪು ಬಗ್ಗೆ ಶಾಸಕ ಶಾಸಕ ತುಕಾರಾಮ್ ಶ್ಲಾಘನೆ

Sanduru Appu Statu
ಸಂಡೂರಿನ ಬಸ್ ಡಿಪೋ ಆವರಣದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ತಳಿ ಭಾನುವಾರ ಶಾಸಕ ಈ.ತುಕಾರಾಮ್ ಅನಾವರಣಗೊಳಿಸಿದರು.
Published on

ಸಂಡೂರು: ತಂದೆ ಡಾ.ರಾಜಕುಮಾರ್ ಹಾದಿಯಲ್ಲಿ ಮಗ ಡಾ.ಪುನೀತ್ ರಾಜಕುಮಾರ್ ನಡೆದಿದ್ದು, ಕುಟುಂಬ ವರ್ಗದವರು ಒಟ್ಟಿಗೆ ಕುಳಿತು ನೋಡುವಂತಹ ಸಿನಿಮಾಗಳನ್ನು ನಾಡಿನ ಜನತೆಗೆ ಕೊಟ್ಟಿದ್ದಾರೆ ಎಂದು ಶಾಸಕ ಈ.ತುಕಾರಾಮ್ ಹೇಳಿದರು.

ಬಸ್ ಡಿಪೋ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುನೀತ್ ರಾಜಕುಮಾರರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ನಟನೆ ಜತೆಗೆ ಸಾಮಾಜಿಕ ಕೊಡುಗೆಯನ್ನೂ ನೀಡಿದ್ದು ಅನನ್ಯ. ಪುನೀತ್ ಕರ್ನಾಟಕ ಯುವ ಕಣ್ಮಿಣಿ. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದರು.

ಪೊಲೀಸ್ ಠಾಣೆ ಸರ್ಕಲ್‌ನಲ್ಲಿ ಅಂಬೇಡ್ಕರ್ ಸರ್ಕಲ್‌ಗೆ ಭೂಮಿಪೂಜೆ ಮಾಡಿದ ಶಾಸಕರು, ವಿಜಯ ಸರ್ಕಲ್‌ನಲ್ಲಿ ಎನ್‌ಎಂಡಿಸಿ ಸಿಎಸ್‌ಆರ್ ಯೋಜನೆಯಡಿ 9 ಆಂಬುಲೆನ್ಸ್ ಲೋಕಾರ್ಪಣೆ ಮಾಡಿದರು. ಜಿಲ್ಲಾ ಖನಿಜ ನಿಧಿಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುರುವ ಗ್ರಾಮಗಳ ವಿದ್ಯುತ್ ಪರಿವರ್ತಕ, ಹಳೆಯ ಲೈನ್‌ಗಳ ನವೀಕರಣಕ್ಕೆ ಭೂಮಿಪೂಜೆ ನೇರವೇರಿಸಿದರು.

ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ಈರೇಶ ಸಿಂಧೆ, ಮಾಜಿ ಅಧ್ಯಕ್ಷರಾದ ಗಡಂಬ್ಲಿ ಚೆನ್ನಪ್ಪ, ಎಲ್.ಎಚ್.ಶಿವಕುಮಾರ್, ಮಾಜಿ ಜಿಪಂ ಸದಸ್ಯ ಅಕ್ಷಯ ಲಾಡ್, ಕಾಂಗ್ರೆಸ್ ಮುಖಂಡರಾದ ವಿಶ್ವಾಸ್‌ಲಾಡ್, ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್, ಬ್ಲಾಕ್ ಅದ್ಯಕ್ಷೆ ಈರಮ್ಮ, ಸಾದನಾ ಬೋಯಿಟೆ, ಗಾಣಿಗರ ವಿರೇಶ್, ಕುರುಬರ ಸತ್ಯಪ್ಪ, ವಾಲ್ಮಿಕಿ ಮಹಾಸಭಾದ ತಾಲುಕು ಅಧ್ಯಕ್ಷ ಬಿ.ಜಯಣ್ಣ, ಷಾಮಿಯಾನ ಅಂಜಿನಪ್ಪ, ಬಿ.ಜಿ.ಸಿದ್ದೇಶ್, ಕಾಳಿಂಗೇರಿ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net