ಸಾಧನೆಗೆ ದೇಹ-ಮನಸ್ಸನ್ನು ಅಣಿಗೊಳಿಸಿ

Sandur SSLC topers Sanmana
ಸಂಡೂರು ತಾಲೂಕಿನ ಕೃಷ್ಣಾನಗರದ ಬಿಕೆಜಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಟಾಪರ್ ಅಂಕಿತಾ ಕೊಣ್ಣೂರ ಹಾಗೂ ಸುಕನ್ಯಾ ಸಂತೋಷ್, ಭಾಗ್ಯಶ್ರೀ, ಜ್ಯೋತಿ ಗುರಯ್ಯ ಮಠಪತಿಯನ್ನು ಶನಿವಾರ ಸನ್ಮಾನಿಸಲಾಯಿತು. ಶಾಲೆಯ ಟ್ರಸ್ಟಿ ಬಿ.ನಾಗನಗೌಡ, ಪ್ರಾಚಾರ್ಯ ಮೋಹನ್ ರಾವ್, ಆರ್.ನಾಗರಾಜ್ ಇತರರಿದ್ದರು.
Published on

ಸಂಡೂರು: ವಿದ್ಯಾರ್ಥಿಗಳು ವಿದ್ಯೆ ಒಲಿಸಿಕೊಳ್ಳಲು ನಿದ್ದೆ ಮತ್ತು ಸೌಲಭ್ಯಗಳ ಸಂಪತ್ತನ್ನು ತೊರೆಯಬೇಕು ಎಂದು ಬಿಕೆಜಿ ಸಂಸ್ಥೆಯ ಟ್ರಸ್ಟಿ ಬಿ.ನಾಗನಗೌಡ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಕೊಣ್ಣೂರ ಅವರನ್ನು ಶನಿವಾರ ಸನ್ಮಾನಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿರುವುದು ಹೆಮ್ಮೆಯ ವಿಚಾರ. ಇದರ ಕೀರ್ತಿ ಅವರ ಪಾಲಕರಿಗೆ ಸಲ್ಲಬೇಕು. ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿದರೂ ಅವರು ನಮ್ಮವರೇ ಎಂದು ಸಂಸ್ಥೆ ಗೌರವಿಸುತ್ತದೆ. ಸಾಧನೆಗಾಗಿ ವಿದ್ಯಾರ್ಥಿಗಳು ಮನಸ್ಸು ಮತ್ತು ದೇಹವನ್ನು ಅಣಿಗೊಳಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಅಂಕಿತಾ ಕೊಣ್ಣೂರ ಮಾತನಾಡಿ, ಸತತ ಪರಿಶ್ರಮ ಪಟ್ಟಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು. ಪಾಲಕರ ಬೆಂಬಲ ಹಾಗೂ ವಸತಿ ಶಾಲೆಯಲ್ಲಿ ಶಿಕ್ಷಕರ ಸಹಕಾರದಿಂದ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದರು.

ಅಂಕಿತಾ ಜತೆಗೆ ಅವರ ಸ್ವಗ್ರಾಮ ವಜ್ರಮಟ್ಟಿ ಶ್ರೀ ಸದ್ಗುರು ಸಿದ್ಧಾರೂಢ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿನಿಯರಾದ ಸುಕನ್ಯಾ ಸಂತೋಷ್, ಭಾಗ್ಯಶ್ರೀ ಹಾಗೂ ಜ್ಯೋತಿ ಗುರಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು. ಬಿಕೆಜಿ ಗ್ಲೋಬಲ್ ಶಾಲೆಯ ಟ್ರಸ್ಟಿ ಬಸವರಾಜ್, ಪ್ರಾಚಾರ್ಯ ಮೋಹನ್ ರಾವ್, ಆರ್.ನಾಗರಾಜ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net