ಇ-ತ್ಯಾಜ್ಯ ಗೊಬ್ಬರ ಮಾರಾಟ - ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್ ಹೇಳಿಕೆ

SanduruP1
ಸಂಡೂರಿನಲ್ಲಿ ಇ-ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಉತ್ಪನ್ನವಾದ ಗೊಬ್ಬರದ ಮಾರಾಟ ಕೇಂದ್ರ ಆರಂಭಿಸಲಾಯಿತು. ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ ಉಜ್ಜಪ್ಪ, ಮುಖ್ಯಾಧಿಕಾರಿ ಕೆ.ಜಯಣ್ಣ, ಪರಿಸರ ಅಭಿಯಂತರೆ ಅನ್ನಪೂರ್ಣ, ಸಿಎಒ ಪ್ರಭುರಾಜ್ ಇತರರಿದ್ದರು.
Published on

ಸಂಡೂರು: ಇ-ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಉತ್ಪನ್ನವಾದ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್ ಹೇಳಿದರು.

ಪಟ್ಟಣದ ಪುರಸಭೆ ಕಚೇರಿ ಬಳಿ ತೆರೆಯಲಾದ ಇ-ತ್ಯಾಜ್ಯ ಗೊಬ್ಬರ ಮಾರಾಟ ಕೆಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ರೈತರಿಗಾಗಿ ಕೆಜಿ ಗೊಬ್ಬರಕ್ಕೆ 5 ರೂ., ಕೊಕೊಪಿಟ್‌ಗೆ 30 ರೂ.ನಿಗದಿ ಮಾಡಿ ಮಾರಾಟ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಜಯಕುಮಾರ್-7349554012ಗೆ ಸಂಪರ್ಕಿಸಿ ಎಂದರು. ಪುರಸಭೆ ಸದಸ್ಯರಾದ ಕೆ.ವಿ.ಸುರೇಶ್, ಸಂತೋಷ್ ಜಾಧವ್, ಅಬ್ದುಲ್ ಮುನಾಫ್, ಕೊಂಚಿಗೇರಿ ಹರೀಶ್, ಮಾಜಿ ಸದಸ್ಯ ನಬಿಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net