ಕುಡಿವ ನೀರು ಸಮರ್ಪಕವಾಗಿ ಪೂರೈಸಿ

ಸಂಡೂರಿನಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್‌ಗೆ ಸಮರ್ಪಕವಾಗಿ ಕುಡಿವ ನೀರು ಪೂರೈಸುವಂತೆ ನಿವಾಸಿಗಳು ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ವಾರ್ಡ್ ಸದಸ್ಯ ಅಬ್ದುಲ್ ಮುನಾಫ್, ಪುರಸಭೆ ಪ್ರಭಾರ ಜೆಇ ಆಶಾ ಇದ್ದರು.
ಸಂಡೂರಿನಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್‌ಗೆ ಸಮರ್ಪಕವಾಗಿ ಕುಡಿವ ನೀರು ಪೂರೈಸುವಂತೆ ನಿವಾಸಿಗಳು ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ವಾರ್ಡ್ ಸದಸ್ಯ ಅಬ್ದುಲ್ ಮುನಾಫ್, ಪುರಸಭೆ ಪ್ರಭಾರ ಜೆಇ ಆಶಾ ಇದ್ದರು.
Published on

ಸಂಡೂರು: ಕುಡಿವ ನೀರನ್ನು ಸಮರ್ಪಕವಾಗಿ ಪೂರೈಸಲು ಒತ್ತಾಯಿಸಿ ಪಟ್ಟಣದ 6 ಮತ್ತು 7ನೇ ವಾರ್ಡ್ ನಿವಾಸಿಗಳು ಶಾಸಕಿ ಅನ್ನಪೂರ್ಣ ತುಕಾರಾಮ್‌ಗೆ ಗುರುವಾರ ಮನವಿ ಮಾಡಿದರು.

ಸದ್ಯ ಎಂಟು ದಿನಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ಕುಡಿವ ನೀರು ಮತ್ತು ಬಳಕೆಗೆ ಬೋರ್‌ನೀರು ಸರಬರಾಜು ಮಾಡಿದರೆ ಅನುಕೂಲವಾಗುತ್ತದೆ. ಬೇಸಿಗೆ ಇರುವುದರಿಂದ ನೀರಿನ ಅಗತ್ಯವಿದೆ ಎಂದು ಮನವರಿಕೆ ಮಾಡಿದರು.

ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ಹಲವು ವರ್ಷಗಳಿಂದ ಕುಡಿವ ನೀರಿನ ಸಮಸ್ಯೆಯಿದೆ. 20 ವರ್ಷಗಳಷ್ಟೂ ಹಳೆಯ ಪೈಪ್‌ಲೈನ್‌ಗಳಿದ್ದು, ಅವುಗಳನ್ನು ಶೀಘ್ರವೇ ಬದಲಾಯಿಸಬೇಕೆಂದು ಸಂಬಂಧಿಸಿದವರಿಗೆ ಸೂಚಿಸಿರುವೆ. ಶೀಘ್ರ ಬದಲಾವಣೆ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಸಹ ತಿಳಿಸಿದ್ದಾರೆ. ಜನರು ಸಹಕಾರ ನೀಡದಲಿ ಎಂದು.

ಶಾಸಕಿ ಸಮಸ್ಯೆ ಇತ್ಯರ್ಥಕ್ಕೆ ಎಷ್ಟು ದಿನಗಳು ಬೇಕೆಂದಾಗ, ಪುರಸಭೆ ಪ್ರಭಾರ ಜೆಇ ಆಶಾ ಪ್ರತಿಕ್ರಿಯಿಸಿ, ಒಂದು ವಾರದೊಳಗೆ ಪರಿಹರಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ಮಾತನಾಡಿ, ಪುರಸಭೆಯಿಂದ ಮೂರು ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಕೆಇಬಿ ವಿದ್ಯುತ್ ಸಂಪರ್ಕ ನೀಡಿದ ಕೂಡಲೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ವಾರ್ಡ್ ಸದಸ್ಯ ಅಬ್ದುಲ್ ಮುನಾಫ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net