ಸಮರ್ಪಣಾ ಭಾವದಿಂದ ಕೆಲಸ ಮಾಡಿ

Sandur Bkg
ಕೃಷ್ಣಾನಗರದ ಬಿಕೆಜಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಿಎ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯೆ ಶಾಂತಲಾ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟಿ ಬಿ.ನಾಗನಗೌಡ, ಪ್ರಾಚಾರ್ಯ ಕೆ.ವಿ.ಮೋಹನರಾವ್ ಇದ್ದರು.
Published on

ಸಂಡೂರು: ನಿರಂತರ ಅಭ್ಯಾಸ ಮತ್ತು ಪರಿಶ್ರಮದ ಮೂಲಕ ಉನ್ನತ ಸ್ಥಾನ ತಲುಪಲು ಸಾಧ್ಯ. ನಮ್ಮೆಲ್ಲರ ಕನಸುಗಳನ್ನು ನನಸಾಗಿಸಲು ಜ್ಞಾನವೇ ಮೂಲಾಧಾರವಾಗಿದೆ. ಯಾವುದೇ ಕೆಲಸವಾದರೂ ಸಮರ್ಪಣಾ ಭಾವ ಮುಖ್ಯ ಎಂದು ವೈದ್ಯೆ ಶಾಂತಲಾ ರವಿಕುಮಾರ ಹೇಳಿದರು.

ಕೃಷ್ಣಾನಗರ ಬಳಿಯಿರುವ ಬಿಕೆಜಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಿಎ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಾಮರ್ಥ್ಯ ಅರಿತು ಇಷ್ಟವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮರ್ಪಣಾ ಭಾವದಿಂದ ಕೆಲಸ ಮಾಡಿದಾಗಲೇ ಯಶಸ್ಸು ಸಿಗುತ್ತದೆ. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ.

ಮಣ್ಣು ಸಂರಕ್ಷಣೆ, ಗಿಡಗಳನ್ನು ನೆಡುವುದು ಮತ್ತು ಪರಿಸರ ಸ್ನೇಹಿ ಕ್ರಮ ಪಾಲಿಸುವುದು ಅತ್ಯಗತ್ಯ ಎಂದ ಅವರು, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಅಧ್ಯಯನ, ಗುರಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸಿಎ ರಾಜಶೇಖರ್ ಮಾತನಾಡಿ, ದೇಶದ ಒಟ್ಟು ಆರ್ಥಿಕ ಅಭಿವೃದ್ಧಿಗೆ ಸಿಎಗಳ ಕೊಡುಗೆ ಅಪಾರ. ಆರ್ಥಿಕ ವಿಶ್ಲೇಷಣೆ, ಆಡಿಟಿಂಗ್, ತೆರಿಗೆ ಮತ್ತು ಸಲಹಾ ಸೇವೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು. ಬಿಕೆಜಿ ಕಾಲೇಜಿನ ಟ್ರಸ್ಟಿ ಬಿ.ನಾಗನಗೌಡ, ಪ್ರಾಚಾರ್ಯ ಕೆ.ವಿ.ಮೋಹನ್‌ರಾವ್, ಶಿಕ್ಷಕರಾದ ಸುಧಾಕರ್, ಪಲ್ಲವಿಸಿಂಗ್ ಮತ್ತು ಅಂಬಿಕಾ. ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net