ಭಾರತವನ್ನು ಕ್ಷಯ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ಅಗತ್ಯ

Toranagallu Nikshay Divas ಕ್ಷಯ
ಸಂಡೂರು ತಾಲೂಕು ತೋರಣಗಲ್ ರೈಲ್ವೆನಿಲ್ದಾಣ ಗ್ರಾಮದ ಬಿ.ಆರ್.ಕ್ಯಾಂಪಿನಲ್ಲಿ ಗುಂಪು ಸಭೆಗಳ ಮೂಲಕ ನಿಕ್ಷಯ್ ದಿವಸ್ ಕುರಿತು ಸೋಮವಾರ ಜಾಗೃತಿ ಮೂಡಿಸಲಾಯಿತು.
Published on

ಸಂಡೂರು: ಪ್ರತಿ ತಿಂಗಳು 15ನೇ ತಾರೀಖಿನಂದು ಕ್ಷಯರೋಗ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದು, 2025ಕ್ಕೆ ಭಾರತವನ್ನು ಕ್ಷಯ ಮುಕ್ತ (Tuberculosis free nation) ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.

ನಿಕ್ಷಯ್ ದಿವಸ್ ಕ್ಷಯ ಕುರಿತು ಜಾಗೃತಿ

ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಗ್ರಾಮದ ಬಿ.ಆರ್.ಕ್ಯಾಂಪಿನಲ್ಲಿ ಗುಂಪು ಸಭೆಗಳ ಮೂಲಕ ನಿಕ್ಷಯ್ ದಿವಸ್ ಕುರಿತು ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಖಾನೆಯ ಕೆಲಸಕ್ಕೆ ಹೋಗುವವರು, ತಂಬಾಕು, ಬೀಡಿ, ಸಿಗರೇಟು, ಗುಟ್ಖಾ, ಹಾನ್ಸ್, ಹೀರಾ, ಪಾನ್ ಪರಾಗ್ ಹಾಕುವವರು, ಮದ್ಯಪಾನ ಮಾಡುವವರು ಮತ್ತು ಆರೋಗ್ಯದ ಗಂಭೀರ ಸಮಸ್ಯೆ ಎದುರಿಸುತ್ತಿರುವವರು ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಯಾರಿಗಾದರೂ ಎರಡು ವಾರದ ವರೆಗೆ ಕೆಮ್ಮು, ಜ್ವರ, ಹಸಿವೆ ಇಲ್ಲದಿರುವವರು, ತೂಕ ಕಡಿಮೆಯಾಗುತ್ತಿರುವವರು, ಕೆಮ್ಮಿದಾಗ ಕಫ, ಕಫದಲ್ಲಿ ರಕ್ತ ಬೀಳುತ್ತಿರುವವರು ಎಲ್ಲೇ ಇದ್ದರೂ ತಕ್ಷಣವಾಗಿ ಆಸ್ಪತ್ರೆಗೆ ಆಗಮಿಸಿ, ವೈದ್ಯರಿಗೆ ಮಾಹಿತಿ ನೀಡಬೇಕು.

ಕ್ಷಯ
ಕ್ಷಯ

ಪೌಷ್ಟಿಕ ಆಹಾರ ಸೇವಿಸಿ

ಈ ಎಲ್ಲ ಲಕ್ಷಣಗಳು ಕ್ಷಯರೋಗದ ಲಕ್ಷಣಗಳಾಗಿರಬಹುದು. ಹತ್ತಿರದ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗುವುದರಿಂದ ರೋಗದ ಬಗ್ಗೆ ನಿಖರ ಮಾಹಿತಿ ಸಿಗುತ್ತದೆ. ಒಂದು ವೇಳೆ ರೋಗ ದೃಢಪಟ್ಟರೆ ಆರು ತಿಂಗಳ ಕಾಲ ಪೂರ್ಣ ಚಿಕಿತ್ಸೆ ಪಡೆಯಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ತಮ್ಮಲ್ಲಿದ್ದ ರೋಗವನ್ನು ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಆಶಾ ಕಾರ್ಯಕರ್ತೆ ಹುಲಿಗೆಮ್ಮ, ವಿಜಯಶಾಂತಿ, ಆಶಾ, ರಾಜೇಶ್ವರಿ, ಗ್ರಾಮಸ್ಥರಾದ ಹುಸೇನ್‌ಸಾಬ್, ಮಹೇಶ್, ಬೀಮಲಿಂಗ, ಕಸ್ತೂರಿ, ಅಖಿಲಾ, ರಮ್ಯಾ, ರಾಧಾ, ಸುಮಂಗಳಾ, ಹನುಮಕ್ಕ, ಕವಿತಾ, ಅಸ್ಮಾ, ಸ್ವಾತಿ, ಅಂಕಿತಾ, ಉಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net