

ಸಂಡೂರು: ವ್ಯಾಪಾರಕ್ಕೆಂದು ಕ್ರಿ.ಶ.1600ರಲ್ಲಿ ಬಂದ ಬ್ರಿಟಿಷರು ನಂತರ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿ ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡರು ಎಂದು ತಾಪಂ ಇಒ ಎಚ್.ಷಡಕ್ಷರಯ್ಯ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ಜರ್ಮನಿ, ಅಮೆರಿಕ, ರಷ್ಯಾ ಮುಂತಾದ ದೇಶಗಳ ಸಂವಿಧಾನ ಅವಲೋಕಿಸಿ ಕೊನೆಗೆ ಕಲಂ 1ರಿಂದ 395ರವರೆಗೆ ಸಂವಿಧಾನ ರಚಿಸಲಾಯಿತು. ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಸಂವಿಧಾನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 1949ರ ನ.26ರಂದು ಸಂವಿಧಾನ ಅಂಗೀಕರಿ ಅರ್ಪಿಸಿಕೊಂಡಿದ್ದೇವೆ ಎಂದರು.
ಹಗರಿಬೊಮ್ಮನಹಳ್ಳಿಯ ಉಪನ್ಯಾಸಕ ಎಂ.ಶಿವಮೂರ್ತಿ, ಬಿಇಒ ಡಾ.ಐ.ಆರ್.ಅಕ್ಕಿ, ದರೋಜಿ ಮಲಿಯಪ್ಪ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್, ಉಪಾಧ್ಯಕ್ಷೆ ಎಂ.ಸಿ.ಲತಾ ಉಜ್ಜಪ್ಪ, ಸದಸ್ಯ ಈರೇಶ್ ಸಿಂಧೆ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ಎಸ್ಟಿ ಅಧಿಕಾರಿ ಕಡ್ಲಬಾಳ್ ರವಿಕುಮಾರ್, ಶಿರಸ್ತೇದಾರ್ ಕೆ.ಎಂ.ಶಿವಕುಮಾರ್ ಪ್ರಮುಖರಾದ ಡಿ.ಕೃಷ್ಣಪ್ಪ, ಬಿ.ಜಯಣ್ಣ, ವದ್ದಟ್ಟಿ ಅಂಬರೀಷ್, ಎಂ.ಶಿವಲಿಂಗಪ್ಪ, ನಿಂಗಪ್ಪ ಐಹೊಳೆ, ರಾಮಕೃಷ್ಣ ಹೆಗಡೆ, ದೇವದಾಸ್, ನಬೀಸಾಬ್ ಇತರರಿದ್ದರು.