

ಸಂಡೂರು: ತೋರಣಗಲ್ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮದಡಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಬುಧವಾರ ನಡೆಯಿತು.
ಜಿಲ್ಲಾ ಬಾಯಿ ಆರೋಗ್ಯ ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ ಮಾತನಾಡಿ, ಇಂತಹ ಶಿಬಿರಗಳಿಂದ ಜನರಿಗೆ ಬಾಯಿ ಆರೋಗ್ಯದ ಕಾಳಜಿ ಹೆಚ್ಚಲಿದೆ. ಮಕ್ಕಳ ಹಲ್ಲುಗಳ ಬಗ್ಗೆಯೂ ಗಮನಹರಿಸಲಿದ್ದಾರೆ. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಿಬಿರ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಸಂಡೂರು ಸಾರ್ವಜನಿಕ ಆಸ್ಪತ್ರೆಯ ದಂತ ಆರೋಗ್ಯಾಧಿಕಾರಿ ಡಾ.ಅಪ್ರೋಜ್ ಬಾನು, ಡಾ.ಕಲಾವತಿ, ಕಂಪ್ಲಿ ಸಿಎಚ್‌ಸಿಯ ಡಾ.ಶ್ರೀನಿವಾಸ್, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯಾ, ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಎಸ್ಡಿಎಂಸಿ ಅಧ್ಯಕ್ಷ ಹೊನ್ನೂರಪ್ಪ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಕಂಕಣವಾಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ, ಜಯಪ್ರದಾ, ಮಲ್ಲಮ್ಮ, ತಿಮ್ಮಕ್ಕ, ಪ್ರತಿಭಾ, ಸುಮಾ, ಮಹಾಂತಮ್ಮ, ಪಾರ್ವತಿ, ಸಿದ್ದೇಶ್, ರಾಜು ನಾಯ್ಕ ಇತರರಿದ್ದರು.