ಮನೆಗಳ ಹಕ್ಕುಪತ್ರ ನೀಡಿ

Sandur Budga Jangam appele letter
ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಬುಡ್ಗ ಜಂಗಮ ನವಗ್ರಾಮದ ಮನೆಗಳ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಾಪಂ ಇಒ ಎಸ್.ಷಡಕ್ಷರಯ್ಯಗೆ ಹಗಲು ವೇಷ ಕಲಾವಿದರು ಮನವಿ ಸಲ್ಲಿಸಿದರು. ಗ್ರಾಪಂ ಮಾಜಿ ಸದಸ್ಯ ವಿ.ರಾಮುಡು, ಅಶ್ವ ತಿಪ್ಪೇಸ್ವಾಮಿ, ಅಶ್ವ ದೊಡ್ಡ ಲಾಲಪ್ಪ, ಅಶ್ವ ಶರಭಯ್ಯ, ಕೊಡವಲಿ ಮಂಜುನಾಥ, ಅಶ್ವ ಬಸವರಾಜ, ಅಶ್ವ ಸುರೇಶ, ಅಶ್ವ ನಾಗರಾಜ ಇತರರಿದ್ದರು.
Published on

ಸಂಡೂರು: ಹಳೇ ದರೋಜಿ ಬುಡ್ಗ ಜಂಗಮ ನವಗ್ರಾಮದ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಾಪಂ ಇಒ ಎಸ್.ಷಡಕ್ಷರಯ್ಯಗೆ ಹಗಲುವೇಷ ಕಲಾವಿದರು ಸೋಮವಾರ ಮನವಿ ಸಲ್ಲಿಸಿದರು.

ಗ್ರಾಪಂ ಮಾಜಿ ಸದಸ್ಯ ವಿ.ರಾಮುಡು ಮಾತನಾಡಿ, 2003-04ನೇ ಸಾಲಿನಲ್ಲಿ ವೆಂಕಟರಾವ್ ಘೋರ್ಪಡೆ ಜಿಪಂ ಅಧ್ಯಕ್ಷರಾಗಿದ್ದಾಗ ಮನೆಗಳ ನಿರ್ಮಾಣವಾಗಿತ್ತು. ಈ ಮನೆಗಳಿಗೆ ಗ್ರಾಪಂನಿಂದ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಆದರೆ, ಹಕ್ಕುಪತ್ರ ನೀಡಿಲ್ಲ. ಗ್ರಾಮ ಸಭೆ ನಡೆಸಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು. ಅಶ್ವ ತಿಪ್ಪೇಸ್ವಾಮಿ, ಅಶ್ವ ದೊಡ್ಡ ಲಾಲಪ್ಪ, ಅಶ್ವ ಶರಭಯ್ಯ, ಮಂಜುನಾಥ, ಅಶ್ವ ಬಸವರಾಜ, ಅಶ್ವ ಸುರೇಶ, ಅಶ್ವ ನಾಗರಾಜ, ದೊಡ್ಡ ಗಾದಿಲಿಂಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net