ಮಕ್ಕಳ ಮೇಲೆ ಪಾಲಕರು ಒತ್ತಡ ಹೇರದಿರಲಿ

Sandur pratibha puraskra
ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಭುಸ್ವಾಮೀಜಿ, ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ, ವೀರಶೈವ ಸಂಘದ ಅಧ್ಯಕ್ಷ ಚಿತ್ರಿಕಿ ಸತೀಶ್ ಕುಮಾರ್, ಉಪಾಧ್ಯಕ್ಷ ಪಿ.ರವಿಕುಮಾರ್ ಇದ್ದರು.
Published on

ಕಾರಾಗೃಹದ ಅಧೀಕ್ಷಕ ಟಿ.ವಿಜಯಕುಮಾರ್ ಸಲಹೆ | ಸಂಡೂರಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಸಂಡೂರು: ಗುರಿ, ಛಲವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಕೊಪ್ಪಳ ಕಾರಾಗೃಹದ ಅಧೀಕ್ಷಕ ಟಿ.ವಿಜಯ ಕುಮಾರ್ ಹೇಳಿದರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು. ಮಕ್ಕಳ ಮೇಲೆ ಇಂತಹದ್ದೇ ಓದಬೇಕೆಂದು ಪಾಲಕರು ಒತ್ತಡ ಹೇರಬಾರದು. ಅವರ ಪಾಡಿಗೆ ಬಿಟ್ಟರೆ ಗುರಿ ಮುಟ್ಟುತ್ತಾರೆ. ನಾನು ಕವಿ, ಲಾರಿ ಡ್ರೈವರ್ ಆಗಬೇಕು ಎಂದುಕೊಂಡಿದ್ದೆ. ಆದರೆ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗಿ ಕಾರಾಗೃಹದ ಅಧೀಕ್ಷಕನಾಗಿದ್ದೇನೆ. ನೀವೂ ಸಹ ಒಳ್ಳೆಯ ಗುರಿ ಇಟ್ಟುಕೊಂಡು ಸಾಗಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ತರಬೇತಿಯನ್ನು ಸಂಡೂರಲ್ಲಿ ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಗದಗ ಶಿವಾನಂದ ಮಠದ ಸದಾಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಜಯಂತಿಗಳು ಮಹತ್ವ ಕಳೆದುಕೊಂಡಿವೆ. ಜಯಂತಿ ಹೆಸರಲ್ಲಿ ಸರ್ಕಲ್‌ಗಳಿಗೆ ತಮ್ಮ ನಾಯಕನ ಹೆಸರಿಡಲು ಪೈಪೋಟಿ ಏರ್ಪಟ್ಟಿದೆ. ಕಲ್ಯಾಣದಲ್ಲಿ ಬಸವಣ್ಣನ ಜನಪ್ರಿಯತೆ ಕಂಡು ಕಾಶ್ಮೀರದ ರಾಜ ತನ್ನ ರಾಜತ್ವವನ್ನೆ ಬಿಟ್ಟು ಅನುಭವ ಮಂಟಪಕ್ಕೆ ಬಂದು ಕಟ್ಟಿಗೆ ಕಡಿದು ಮಾರಿ ಬದುಕು ಕಟ್ಟಿಕೊಂಡ. ಬಸವಾದಿ ಶಿವಶರಣರ ವಚನಗಳಿಂದ ಪ್ರೇರಿತವಾಗಿ ಸಂವಿಧಾನವನ್ನು ಡಾ.ಅಂಬೇಡ್ಕರ್ ರಚಸಿದರು ಎಂಬ ಮಾತಿದೆ. ಅಷ್ಟರಮಟ್ಟಿಗೆ ವಚನಗಳು ಪ್ರಸಿದ್ಧಿ ಪಡೆದಿದ್ದವು ಎಂದರು.

ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಸಂಡೂರಲ್ಲಿ ರಾಜರ ಕಾಲದಿಂದಲೂ ಒಂದೇ ಒಂದು ಕೋಮುಗಲಭೆ ನಡೆಯದಂತೆ ನೋಡಿಕೊಂಡು ಬಂದಿದ್ದಾರೆ. ರಾಜಸ್ಥಾನ, ಉತ್ತರಪ್ರದೇಶ ಸೇರಿ ಉತ್ತರದ ರಾಜ್ಯಗಳಲ್ಲಿ ಕಡು ಬಡತನವಿದೆ. ಕರ್ನಾಟಕದಲ್ಲಿ ಮಠ ಮಾನ್ಯಗಳಿಂದಾಗಿ ಸಾಕ್ಷರತೆ ಬೆಳೆದಿದೆ. ಅದಕ್ಕೆ ಬಸವಾದಿ ಶಿವಶರಣರು ಹಾಕಿಕೊಟ್ಟ ಮೇಲ್ಪಂಕ್ತಿ ಕಾರಣ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ, ಉಪನ್ಯಾಸಕ ಕೆ.ತಿಪ್ಪೇರುದ್ರ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ತಾಪಂ ಇಒ ಎಚ್.ಷಡಕ್ಷರಯ್ಯ, ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಚಿತ್ರಿಕಿ ಸತೀಶ್‌ಕುಮಾರ, ಉಪಾಧ್ಯಕ್ಷ ಪಿ.ರವಿಕುಮಾರ್, ಕಾರ್ಯದರ್ಶಿ ಜಿ.ವಿರೇಶ್, ಪಿಕೆಎಸ್‌ಎಸ್‌ಎನ್ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್, ಮೇಲುಸೀಮೆ ಶಂಕ್ರಪ್ಪ, ಬಪ್ಪಖಾನ್ ಕುಮಾರಸ್ವಾಮಿ, ಬಿ.ಜಿ.ಸಿದ್ದನಗೌಡ, ಸುರೇಶ್ ಗೌಡ, ಜಿ.ಟಿ.ಪಂಪಾಪತಿ, ಕಿನ್ನೂರೇಶ್ವರ, ಬಸವನಗೌಡ, ರಮೇಶ್ ಗಡಾದ, ಭುವನೇಶ್ ಮೇಟಿ, ಎಸ್‌ಟಿಡಿ ರುದ್ರಗೌಡ, ಅಡಿವೆಪ್ಪ, ಕುರುಬರ ಸತ್ಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net