

ಸಂಡೂರು: ಬಗರ್ ಹುಕುಂ ಸಮಿತಿ ಸಕ್ರಮೀಕರಣ ಸಭೆ ದಿನಾಂಕ ನಿಗದಿ ಮಾಡುವಂತೆ ಮತ್ತು ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಸಮಿತಿ ಸದಸ್ಯರು ಹಾಗೂ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಸಮಿತಿ ಸದಸ್ಯ ಎಸ್.ಶಿವಶಂಕರ್ ಮಾತನಾಡಿ, ತಾಲೂಕಿನಲ್ಲಿ ಕೈಗಾರಿಕೆಗಳು, ಸೋಲಾರ್, ವಿಂಡ್ ಉದ್ಯಮಗಳು ವ್ಯಾಪಕವಾಗುತ್ತಿವೆ. ವ್ಯವಸಾಯ ನಂಬಿರುವ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ನಮೂನೆ 57ರಡಿ ಸಲ್ಲಿಸಲಾಗಿದೆ. ಆದರೆ, ಸೆ.26ರ ಸಭೆಯಲ್ಲಿ 596 ಅರ್ಜಿಗಳನ್ನು ಅಪೂರ್ಣಗೊಳಿಸಲಾಗಿದೆ. ಅ.10, ನ.7ರ ಸಭೆಗಳು ಸಹ ನಡೆದಿಲ್ಲ. ಚುನಾವಣೆ ಪೂರ್ವದಲ್ಲಿ ಉಳಿದಿರುವ ಐದಾರು ತಿಂಗಳಲ್ಲಿ ಅನಿಯಮಿತವಾಗಿ ಸಭೆಗಳನ್ನು ಕರೆದು, ಬಗರ್‌ಹುಕುಂ ಸಮಿತಿ ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದರು.
ಸದಸ್ಯರಾದ ಎನ್.ಯಂ.ವಿಜಯಲಕ್ಷ್ಮೀ, ಎನ್.ತಿಪ್ಪೇಸ್ವಾಮಿ, ಹೊನ್ನೂರಪ್ಪ, ಜಿ.ಆನಂದ್ ಮೆಟ್ರಿಕಿ, ಹನುಮಂತ, ಅಜಿತ್ ಮುಂತಾದವರಿದ್ದರು.