ವಿದ್ಯಾರ್ಥಿಗಳು ಭತ್ತದ ಗದ್ದೆಗಳಾಗಬೇಕೆ ಹೊರತು ಚೀಲಗಳಲ್ಲ

KARYAGARA
ಸಂಡೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಆದಾಯ ತೆರಿಗೆಯ ವಿಶೇಷ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಸೋಮವಾರ ಪುಸ್ತಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಹುಚ್ಚೂಸಾಬ್, ನಿವೃತ್ತ ದೈಹಿಕ ಶಿಕ್ಷಕ ಸೋಮಪ್ಪ ಜಿ.ಎಸ್, ಗಂಗಾವತಿ ಸರ್ಕಾರಿ ಪದವಿ ಕಾಲೇಜು ವಾಣಿಜ್ಯ ವಿಭಾಗದ ಅಕ್ಕಿ ಮಾರುತಿ ಇತರರಿದ್ದರು.
Published on

ಸಂಡೂರು: ವಿದ್ಯಾರ್ಥಿಗಳು ಭತ್ತದ ಗದ್ದೆಗಳಾಗಬೇಕೆ ಹೊರತು ಭತ್ತ ತುಂಬುವ ಚೀಲಗಳಾಗಬಾರದು ಎಂದು ನಿವೃತ್ತ ದೈಹಿಕ ಶಿಕ್ಷಕ ಸೋಮಪ್ಪ ಜಿಎಸ್ ಕಿವಿಮಾತು ಹೇಳಿದರು.

ಸರ್ಕಾರಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಆದಾಯ ತೆರಿಗೆ ವಿಶೇಷ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ವಿದ್ಯಾರ್ಥಿಗಳು ಪ್ರತಿ ಕ್ಷಣ ಹೊಸತನ ಹುಡುಕುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.
ಗಂಗಾವತಿ ಸರ್ಕಾರಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಅಕ್ಕಿ ಮಾರುತಿ, ಇತ್ತೀಚಿಗೆ ಆದಾಯ ತೆರಿಗೆಯಲ್ಲಾದ ಬದಲಾವಣೆ ಕುರಿತು ಚರ್ಚಿಸಿದರು. ಜಿಎಸ್‌ಟಿ ತೆರಿಗೆಯಲ್ಲಾದ ಬದಲಾವಣೆಗಳು ಸಣ್ಣ ಉದ್ದಿಮೆಗಳಿಗೆ ಸಂಕಷ್ಟ ತಂದಿಟ್ಟಿದೆ. ಜಿಎಸ್‌ಟಿ ಆರಂಭದಲ್ಲಿ 20-40ಲಕ್ಷ ರೂ. ಬಿಜಿನೆಸ್ ಮಾಡಿದರೂ ಪರವಾಗಿಲ್ಲ ಎಂದು ಹೇಳಿದರು. ಇದೀಗ 5ಲಕ್ಷ ರೂ.ಗೆ ಇಳಿಸಲಾಗಿದೆ ಎಂದರು.

ಪ್ರಾಂಶುಪಾಲ ಡಾ.ಹುಚ್ಚೂಸಾಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ವಹಣ ಶಾಸ್ತ್ರದ ಮುಖ್ಯಸ್ಥರಾದ ಡಾ. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net