10ರೊಳಗೆ ಅಂಬೇಡ್ಕರ್ ವೃತ್ತ ನಿರ್ಮಿಸಿ - ಸಂಡೂರಿನಲ್ಲಿ ನಾನಾ ಸಂಘಟನೆಗಳಿಂದ ಮನವಿ

ಸಂಡೂರಿನಲ್ಲಿ ತಹಸೀಲ್ದಾರ್ ಅನಿಲ್ ಕುಮಾರಗೆ ವಿವಿಧ ಸಂಘಟನೆಗಳ ಪ್ರಮುಖರು ಮನವಿ ಸಲ್ಲಿಸಿದರು. ಪುರಸಭೆ ಸದಸ್ಯ ಎಲ್.ಎಚ್.ಶಿವಕುಮಾರ್, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಐಹೊಳೆ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಮಕೃಷ್ಣ ಹೆಗಡೆ, ಪ್ರಮುಖರಾದ ಮಲ್ಲೇಶ್ ಕಮ್ಮತ್ತೂರು, ಹೊನ್ನೂರಸ್ವಾಮಿ, ಮರಿಸ್ವಾಮಿ, ಎಚ್.ಗಂಗಪ್ಪ, ಕಾಶಪ್ಪ, ತಾರಾನಗರ ರುದ್ರಮುನಿ, ಎಚ್.ಕುಮಾರಸ್ವಾಮಿ, ಹನುಮಂತರೆಡ್ಡಿ ಇತರರಿದ್ದರು.

Published on

ಸಂಡೂರು: ಪಟ್ಟಣದ ಪೊಲೀಸ್ ಠಾಣೆ ಮುಂದಿನ ರಸ್ತೆಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತ ನಿರ್ಮಿಸಿ ಪುತ್ಥಳಿ ಸ್ಥಾಪಿಸಲು ಒತ್ತಾಯಿಸಿ ಆದಿಜಾಂಬವ ಮಹಾಸಭಾ, ದಲಿತ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ತಹಸಿಲ್ದಾರ್ ಅನಿಲ್ ಕುಮಾರಗೆ ಶನಿವಾರ ಮನವಿ ಸಲ್ಲಿಸಿದರು.

2022ರ ಸೆ.7ರಂದು ಪುರಸಭೆಯು ಸಂಘಟನೆಗಳ ಮತ್ತು ಸರ್ವ ಸದಸ್ಯರ ಸಭೆಯನ್ನು ಕರೆದು ಪೊಲೀಸ್ ಠಾಣೆ ಮುಂಭಾಗದಲ್ಲಿ ವೃತ್ತ ಮತ್ತು ಪುತ್ಥಳಿಯನ್ನು ಸ್ಫಾಪಿಸವ ಕುರಿತು ತೀರ್ಮಾನಿಸಲಾಯಿತು. 2023ರ ಮಾ.9ರಂದು ಎಸಿಗೆ ಈ ಕುರಿತು ಮನವಿ ಮಾಡಲಾಗಿದ್ದು, 2023ರಲ್ಲೇ ಭೂಮಿಪೂಜೆ ನೆರವೇರಿಸಲಾಗಿದೆ. ಆದರೆ, ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ಏ.10ರೊಳಗೆ ವೃತ್ತ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಏ.11ರಂದು ಅಂಬೇಡ್ಕರ್ ವೃತ್ತದಲ್ಲಿ ನಾವೇ ಪುತ್ಥಳಿ ನಿರ್ಮಿಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net