ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ: ಸಂಡೂರು ಶಾಸಕ ಇ.ತುಕಾರಾಮ್ ಸಲಹೆ

17102021 Sandur Valibal turnment
Published on


ಸಂಡೂರು: ಕ್ರೀಡೆಗಳು ಮನುಷ್ಯನನ್ನು ದೈಹಿಕ, ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಇ.ತುಕಾರಾಮ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಂಡೂರು ರಾಯಲ್ ವಾಲಿಬಾಲ್ ಕ್ಲಬ್ ಭಾನುವಾರ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ಮಟ್ಟದ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಜಾಗತೀಕರಣ, ಉದಾರೀಕರಣ ನೀತಿಗಳಿಂದಾಗಿ ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳು ದೇಶ-ವಿದೇಶದ ಟೂರ್ನಿಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶವಿದೆ. ಕ್ರೀಡಾ ಸಾಧಕರಿಗೆ ಉದ್ಯೋಗ ನೇಮಕಾತಿಗಳಲ್ಲೂ ಮೀಸಲು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಸೋಲು-ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾಧನೆ ಮಾಡಬೇಕು ಎಂದರು.

ಪಟ್ಟಣದ ನಾಲ್ಕೂ ಸೇರಿ ವಿವಿಧ ತಾಲೂಕುಗಳ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಕ್ಲಬ್‌ನ ಪದಾಧಿಕಾರಿಗಳಾದ ಕೆ.ವಿಜಯಕುಮಾರ್, ಡಾ.ಚಂದ್ರಪ್ಪ, ಅಶೋಕ್ ಘಾಟ್ಗೆ, ಬಿ.ಪ್ರಭಾಕರ್, ಮಹಾಂತೇಶ, ಷಾಮಿಯಾನ ಅಂಜಿನಪ್ಪ, ಕೆಎಸ್‌ಕೆ ಶಂಭು, ಎಂ.ನಾಗರಾಜ, ಗೌತಮ್, ಟಿ.ಜಿ.ಸುರೇಶಗೌಡ, ಕೆ.ಕಾಶಿ, ಕೆ.ಮಂಜುನಾಥ, ರಾಘವೇಂದ್ರ, ಪಿ.ಕೆ.ನಾಗರಾಜ, ಎ.ಕೊಟ್ರೇಶ್, ಮುಖಂಡರಾದ ಕೆ.ಎಸ್.ಶಿವಪ್ಪ, ಪಿ.ಜಯರಾಂ, ವಾಮದೇವ, ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net