ಸಂದೀಪ ಕೋಠಾರಕರ್ ಗೆ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ

PDO of the Month
Published on

ಕಾರವಾರ:ಜಿಲ್ಲಾ ಪಂಚಾಯಿತಿಯಿಂದ ಪ್ರತಿ ತಿಂಗಳು ನೀಡಲಾಗುವ "ಪಿಡಿಒ ಆಫ್ ದಿ ಮಂತ್" ಪ್ರಶಸ್ತಿಯನ್ನು ಕಾರವಾರ ಮುಡಗೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂದೀಪ ಕೊಠಾರಕರ್ ಪಡೆದಿದ್ದಾರೆ.

ಜಿಪಂ ಸಿಇಒ ಈಶ್ವರ ಕಾಂದೂ ಅವರು ಬುಧವಾರ ಕಚೇರಿಯಲ್ಲಿ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.

ಪ್ರಶಸ್ತಿ ಪುರಸ್ಕೃತರಾದ ಪಿಡಿಒ ಸಂದೀಪ ಕೋಠಾರಕರ ಮಾತನಾಡಿ, ಗ್ರಾಮೀಣ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ತೋರಿರುವ ಕರ್ತವ್ಯ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಸಂತೋಷವಾಗಿದೆ.

ಮಾನವೀಯ ನೆಲೆಯಲ್ಲಿ ಕಾನೂನಾತ್ಮಕ ಪರಿಧಿಯೊಳಗೆ ಉತ್ತಮವಾಗಿ ಕಾರ್ಯನಿರ್ವಸಬೇಕಾದರೆ ಮೇಲಾಧಿಕಾರಿಗಳ ನಿರ್ದೇಶನ, ಮಾರ್ಗದರ್ಶನ ಅವಶ್ಯಕವಾಗಿರುತ್ತದೆ.

ಈ ರೀತಿಯ ಪ್ರಶಸ್ತಿ ಹಾಗೂ ಗೌರವಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಗುಣಮಟ್ಟದ ಆಡಳಿತ ನೀಡಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸ್ಪೂರ್ತಿದಾಯಕ.

ಜೊತೆಗೆ ಪ್ರಶಸ್ತಿ ಲಭಿಸಿದ್ದು, ಆತ್ಮವಿಶ್ವಾಸ ವೃದ್ಧಿಯೊಂದಿಗೆ ದಕ್ಷತೆಯಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಡಿ.ಎಂ. ಜಕ್ಕಪ್ಪಗೋಳ, ಮುಖ್ಯ ಲೆಕ್ಕಾಧಿಕಾರಿಗಳಾದ ಸತೀಶ ಪವಾರ, ಯೋಜನಾ ನಿರ್ದೇಶಕ(ಡಿಆರ್‌ಡಿಎ) ಕರೀಂ ಅಸದಿ ಉಪಸ್ಥಿತರಿದ್ದರು.

ಸಂದೀಪ ಕೋಠಾರಕರ ಅವರು ಬಿಎ, ಬಿಎಡ್ ಪದವಿದರರಾಗಿದ್ದು, 2010ರಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ.

ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತಿಯು ಸಂದೀಪ ಕೋಠಾರಕರ ಕಾರ್ಯಾವಧಿಯಲ್ಲಿ 2016-17ರಲ್ಲಿ ತಾಲೂಕಿನ ಮೊದಲ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿ ಪುರಸ್ಕಾರ ಪಡೆದಿದೆ.

2021-22ನೇ ಸಾಲಿನಲ್ಲಿ ಅಮೃತ ಗ್ರಾಮಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕಿರುವ ಕಾಮಗಾರಿಗಳಾದ ಶಾಲಾ-ಅಂಗನವಾಡಿ ಶೌಚಾಲಯ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ, ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು, ಗ್ರಂಥಾಲಯ ಡಿಜಿಟಲೀಕರಣ, ಸೌರ ವಿದ್ಯುತ್ ಅಳವಡಿಕೆ, ಸ್ಮಶಾನ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಬೀದಿ ದೀಪ ನಿರ್ವಹಣೆ ಸೇರಿದಂತೆ ಇನ್ನಿತರ ಅವಶ್ಯಕ ಕಾಮಗಾರಿಗಳನ್ನು ಅನುಷ್ಠಾನ ಮಾಡಿದ್ದಾರೆ.

ಸಾರ್ವಜನಿಕರ ಕೆಲಸ, ಕಾರ್ಯಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾವುದೇ ವಿಳಂಬವಾಗದ ರೀತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆ, ಮೇಲಾಧಿಕಾರಿಗಳು ನೀಡಿದ ಜವಾಬ್ದಾರಿಯನ್ನು ಆಸಕ್ತಿಯಿಂದ ವಹಿಸಿಕೊಂಡು ಅಚ್ಚುಕಟ್ಟಾಗಿ ನಿಭಾಯಿಸುವ ಗುಣವಿದ್ದರೆ ಸರಕಾರದ ವಿವಿಧ ಯೋಜನೆಗಳು ಪರಿಣಾಮಕಾರಿ ಅನುಷ್ಠಾನದೊಂದಿಗೆ ಪ್ರತೀ ಸೌಲಭ್ಯಗಳು ಗ್ರಾಮೀಣ ಜನರಿಗೆ ತಲುಪಿಸಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪಿಡಿಒ ಕಾರ್ಯ ಪ್ರವೃತ್ತರಾಗಬೇಕಿದೆ. ಈಶ್ವರ ಕಾಂದೂ, ಸಿಇಒ, ಜಿಲ್ಲಾ ಪಂಚಾಯಿತಿ, ಉತ್ತರ ಕನ್ನಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net