ಜಮೀನಿನಲ್ಲಿ ಬೆಳೆದಿದ್ದ 3 ಕೆ.ಜಿ. ಶ್ರೀಗಂಧದ ಮರ ಕಳ್ಳತನ

Crime Logo
Published on

ರಾಣೆಬೆನ್ನೂರ: ಜಮೀನಿನಲ್ಲಿ ಬೆಳೆಯಲಾಗಿದ್ದ ಶ್ರೀಗಂಧದ ಮರ ಕಡಿದು 3 ಕೆ.ಜಿ.ಯಷ್ಟು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಹರನಗಿರಿ ಗ್ರಾಮದಲ್ಲಿ  ನಡೆದಿದೆ.

ಶಿವಾನಂದಪ್ಪ ಹನುಮಂತಪ್ಪ ಕುಪ್ಪೇಲೂರ (43) ಎಂಬುವರ ಗಂಧದ ಮರ ಕಳ್ಳತನ ಮಾಡಿರುವುದು.

ಇವರು ಜಮೀನಿನಲ್ಲಿ 450 ಶ್ರೀಗಂಧದ ಮರ ಬೆಳೆಸಿದ್ದಾರೆ. ಇದರಲ್ಲಿ 12 ಮರಗಳನ್ನು ಅರ್ಧ ಕಟಾವು ಮಾಡಿ ಒಂದು ಮರದ 30 ಸಾವಿರ ರೂ. ಮೌಲ್ಯದ 3 ಕೆ.ಜಿ.ಯಷ್ಟು ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net