ಮೈಸೂರಿನಲ್ಲಿ ಗಂಧದ ಮರ ಕಳವು

MND SANDALWOOD
Published on

ಮೈಸೂರು: ನಗರದ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದ ಆವರಣದಲ್ಲಿದ್ದ ಗಂಧದ ಮರವನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಳ್ಳರು ಏ.13 ರಂದು ಕೇಂದ್ರದ ಆವರಣಕ್ಕೆ ಆಗಮಿಸಿ 2.7 ಲಕ್ಷ ರೂ.ಮೌಲ್ಯದ ಶ್ರೀಗಂಧದ ಮರವನ್ನು ಕಳುವು ಮಾಡಿದ್ದಾರೆ ಎಂದು ಭದ್ರತಾ ಸಿಬ್ಬಂದಿ ರಾಜೇಗೌಡ ದೂರು ನೀಡಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net