

ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಮೀನೊಂದರಲ್ಲಿ ಬೆಳೆಸಿದ್ದ ಎರಡು ಶ್ರೀಗಂಧದ ಮರಗಳನ್ನು ಬುಧವಾರ ರಾತ್ರಿ ಕಳ್ಳರು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಗ್ರಾಮದ ರೈತ ಜಿ.ಎಂ. ಕರುಣ ಎಂಬುವವರಿಗೆ ಸೇರಿದ ಹೊಲದ ಬದುವಿನಲ್ಲಿ ಎರಡು ಶ್ರೀಗಂಧದ ಮರಗಳಿದ್ದವು. ಕಳೆದ 10 ವರ್ಷಗಳಿಂದ ತಮ್ಮ ಜಮೀನನಲ್ಲಿ ರೈತ ಕರುಣ ಶ್ರೀಗಂಧದ ಮರಗಳನ್ನು ನೆಟ್ಟು ಬೆಳೆಸಿದ್ದರು.
ಕಳ್ಳರು ಮಷಿನ್ ಕಟ್ಟರ್ ಬಳಸಿ ಮರದ ಬುಡ ಕತ್ತರಿಸಿ ರೆಂಬೆ- ಕೊಂಬೆ ಬಿಟ್ಟು ಹೋಗಿದ್ದು, ಮರುದಿನ ರೈತ ಹೊಲಕ್ಕೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.