ಶ್ರೀಗಂಧ ಕಟ್ಟಿಗೆ ಕಳ್ಳರ ಬಂಧನ: ಸಿರಗುಪ್ಪದಲ್ಲಿ 1.60 ಲಕ್ಷ ರೂ. ಮೊತ್ತದ ಶ್ರೀಗಂಧದ ಮರದ ತುಂಡು ವಶ

291121 Siraguppa Thief Arrest on Srigandha
ಶ್ರೀಗಂಧ ಕಳ್ಳರನ್ನು ಬಂಧಿಸಿದ ಸಿರಗುಪ್ಪ ಠಾಣೆ ಪೊಲೀಸರು.
Published on

ಸಿರಗುಪ್ಪ: ನಗರ ಹೊರವಲಯದ ಕಾಲುವೆ ಬಳಿ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಸಿಪಿಐ ಟಿ.ಆರ್.ಪವಾರ್, ಅಪರಾಧ ವಿಭಾಗದ ಪಿಎಸ್‌ಐ ನಾರಾಯಣಸ್ವಾಮಿ ನೇತೃತ್ವದ ಸಿಬ್ಬಂದಿ ಭಾನುವಾರ ದಾಳಿ ನಡೆಸಿ, ಐವರನ್ನು ಬಂಧಿಸಿದೆ. ಬಾಲರಾಜು, ಶಿವು, ಈರಣ್ಣ, ಪಶುಪತಿ, ಕೋದಂಡರಾಮ ಬಂಧಿತರು. ತಾಲೂಕಿನ ನಾರಾಯಣ ಕ್ಯಾಂಪ್‌ನ ಹರಿಕೃಷ್ಣ ಎನ್ನುವವರ ಹೊಲದಲ್ಲಿ ಬೆಳೆದಿದ್ದ ಗಂಧದ ಮರವನ್ನು ಕಡಿದ ಐದು ಜನ ಆರೋಪಿಗಳು, ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಟ್ರಾೃಕ್ಟರ್ ಸಮೇತ 1.60 ಲಕ್ಷ ರೂ. ಮೊತ್ತದ 80 ಕೆಜಿ ಗಂಧದ ಕಟ್ಟಿಗೆ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net