ಶ್ರೀಗಂಧ ಸಾಗಿಸುತ್ತಿದ್ದವ ಬಂಧನ

28 smg 10
Published on

ಶಿವಮೊಗ್ಗ: ಸವಳಂಗ ರಸ್ತೆಯ ಬಿಕೋನಹಳ್ಳಿ ಬಳಿ ಬೈಕ್‌ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ವ್ಯಕ್ತಿಯನ್ನು ಶಂಕರ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದ್ದು, 5ರಿಂದ 6 ಲಕ್ಷ ರೂ. ಮೌಲ್ಯದ ಶ್ರೀಗಂಧ ಮತ್ತು ಬೈಕ್ ವಶಕ್ಕೆ ಪಡೆದಿದ್ದಾರೆ.

ಸೋಮಿನಕೊಪ್ಪ ಭೋವಿ ಕಾಲನಿ ನಿವಾಸಿ ಕೆ.ಹೇಮಣ್ಣ (40) ಬಂಧಿತ. ಈತ ಗ್ರಾಹಕರಿಗೆ ಮಾರಾಟ ಮಾಡಲು ಕರಕುಶಲ ಶ್ರೀಗಂಧವನ್ನು ಬೈಕ್‌ನಲ್ಲಿಟ್ಟುಕೊಂಡು ಸವಳಂಗ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಬಿಕೋನಹಳ್ಳಿಯಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಬೈಕ್ ತಡೆದು ತಪಾಸಣೆ ನಡೆಸಿದಾಗ ಚೀಲದಲ್ಲಿ ಶ್ರೀಗಂಧ ಪತ್ತೆಯಾಗಿತ್ತು.

ಆತ ನೀಡಿದ ಮಾಹಿತಿ ಮೇರೆಗೆ ಸೋಮಿನಕೊಪ್ಪದ ಮನೆ ಮೇಲೆ ದಾಳಿ ನಡೆಸಿ ಒಟ್ಟಾರೆ 55ರಿಂದ 60 ಕೆಜಿ ಶ್ರೀಗಂಧ ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net