

ಹಾವೇರಿ: ಮನೆಯ ಪಕ್ಕದಲ್ಲಿ ಬೆಳೆದಿದ್ದ 1 ಲಕ್ಷ ರೂ. ಮೌಲ್ಯದ 20 ವರ್ಷದ ಗಂಧದ ಮರವನ್ನು ಯಾರೋ ಕಡಿದು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬಸವರಾಜ ಮಲ್ಲಪ್ಪ ಕಿತ್ತೂರ (65) ಎಂಬುವರು ಬೆಳೆದಿದ್ದ ಗಂಧದ ಮರ ಕಳ್ಳತನ ಮಾಡಿರುವುದು.
ಇವರು ಮನೆ ಪಕ್ಕದಲ್ಲಿ ಗಂಧದ ಮರ ಬೆಳೆಸಿದ್ದರು. ರಾತ್ರಿ ಸಮಯದಲ್ಲಿ ಯಾರೋ ಕಟಾವು ಮಾಡಿ ಕಳ್ಳತನ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.