

ಬೆಂಗಳೂರು: ಚಿತ್ರನಟಿ ರಾಗಿಣಿ ಅಂತ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ತಗೊಂಡ್ವಿ. ಡ್ರಗ್ಸ್ ಹುಡುಗಿ ಅಂತಲ್ಲ. ಹೀಗೆಂದವರು; ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ. ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವಾಕಾಂಕ್ಷಿಗಳು ಕಾಯಬೇಕು
ಸಚಿವರಾಗುವುದಕ್ಕೆ ಆಕಾಂಕ್ಷಿಗಳು ಕಾಯಬೇಕು. ನಾವು 14 ತಿಂಗಳು ಕಾದಿದ್ದೇವೆ. ಅದರಲ್ಲಿ 8 ತಿಂಗಳು ಕೋರ್ಟ್ಗೆ ಅಲೆದಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಸ್ನೇಹಿತರಿಗೆ ತಾಳ್ಮೆ ಮಂತ್ರ ಬೋಧಿಸಿದರು.
ಅಧಿವೇಶನದ ಮುನ್ನವೇ ಆಪ್ತರು ಸಚಿವರಾಗುತ್ತಾರೆ ಎಂದು ನಾನು ಭವಿಷ್ಯ ನುಡಿಯಲಾರೆ. ಹೈಕಮಾಂಡ್, ಸಿಎಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವರು. ವಿಳಂಬವಾಗಿದೆ ಎಂದೇನಲ್ಲ, ತಾಂತ್ರಿಕ ಇನ್ನಿತರ ಕಾರಣಗಳಿರುತ್ತವೆ. ನಾನೂ ಒತ್ತಡವೂ ಹೇರುವುದಿಲ್ಲ.