

ಮೈಸೂರು: ನಗರದ ಕಾರಂಜಿ ಕೆರೆ ಆವರಣದಲ್ಲಿ ಬೃಹತ್ ಗಾತ್ರದ ಗಂಧದ ಮರವೊಂದನ್ನು ಕಳ್ಳರು ಕಳವು ಮಾಡಿದ್ದಾರೆ.
ಮೈಸೂರು ಮೃಗಾಲಯ ಸಿಬ್ಬಂದಿ ಬುಧವಾರ ಕಾರಂಜಿ ಕೆರೆಯಲ್ಲಿ ಗಸ್ತಿನಲ್ಲಿದ್ದ ಸಂದರ್ಭ ಮರ ಕಳವು ಆಗಿರುವುದು ಕಂಡು ಬಂತು. 20 ವರ್ಷದ ಹಿಂದೆ ನೆಟ್ಟು ಬೆಳೆಸಿದ ಗಂಧದ ಮರವನ್ನು ಕಳ್ಳರು ಕತ್ತರಿಸಿ ನಾಟಗಳಾಗಿ ಪರಿವರ್ತಿಸಿ ಕಾಂಪೌಂಡ್‌ನಿಂದ ಆಚೆ ನಾಟಗಳನ್ನು ಎಸೆದು ಕದ್ದೊಯ್ದಿದ್ದಾರೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.