ಆ.22 ರಿಂದ 31ರವರೆಗೆ ಸ್ಯಾಂಡಲ್ ಸೋಪ್ ಮೇಳ

raichur
raichur
Published on

ರಾಯಚೂರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಆ.22 ರಿಂದ 31 ವರೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಗಂಗಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರ್ ಸ್ಯಾಂಡಲ್ ಸೋಪ್ ಹೆಸರಿನಿಂದ ನಾಡಿನಾದ್ಯಂತ ಖ್ಯಾತಿ ಪಡೆದಿದೆ. ಉತ್ಕೃಷ್ಟ ದರ್ಜೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ರಿಯಾಯ್ತಿದರಲ್ಲಿ ವಸ್ತುಗಳ ಖರೀದಿಗೆ ಅವಕಾಶವಿದೆ. ಗಂಧದ ಎಣ್ಣೆ ಮತ್ತು ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನ, ಮಾರ್ಜಕ,ಸೌಂದರ್ಯ ವರ್ಧಕ, ಅಗರಬತ್ತಿ ಸೇರಿ 50 ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ದಾಪುಗಾಲು ಇಟ್ಟಿದೆ.

2023-24 ಸಾಲಿನಲ್ಲಿ 1571 ಕೋಟಿ ವಹಿವಾಟು ನಡೆಸಿ 362 ಕೋಟಿ ರೂ ನಿವ್ವಳ ಲಾಭಗಳಿಸಿದೆ. 2024-25 ರಲ್ಲಿ ಉತ್ಪನ್ನಗಳ ಮಾರಾಟದಲ್ಲಿ 1785 ಕೋಟಿ ವಹಿವಾಟು ನಡೆಸಿ, 450 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. 108 ವರ್ಷಗಳ ಇತಿಹಾಸದಲ್ಲಿ ಮೇ.25ರಲ್ಲಿ ಮಾರಾಟ 186 ಕೋಟಿ ರಗಳ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಶ್ರೀಗಂಧವನ್ನು ಪಡೆಯಲು 10 ಜನ ರೈತರೊಂದಿಗೆ ಒಡಂಬಡಿಕೆ ಮಾಡಿ ಕೊಳ್ಳಲಾಗಿದೆ. ಕೆಎಸ್‌ಡಿಎಲ್ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಚಿತ್ರ ನಟಿ ತಮನ್ನಾ ಭಾಟಿಯಾ ಇವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಅಲ್ಲದೇ ರಾಜ್ಯ ಇಬ್ಬರು ನಟಿಯನ್ನು ಸಹ ನೇಮಿಸಿಕೊಳ್ಳಲಾಗಿದೆ.

ಕಳೆದ ವರ್ಷ ಹೈದರಬಾದ್‌ನಲ್ಲಿ ಆಕ್ರಮವಾಗಿ ನಕಲಿ ಸೋಪುಗಳನ್ನು ಮಾರಾಟ ಮಾಡಿರುವವ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ವ್ಯವಸ್ಥಾಪಕ ಗುರುಪ್ರಸಾದ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net