

ಹುಬ್ಬಳ್ಳಿ: ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿ ಮತ್ತು 20 ಸಾವಿರ ರೂ. ಮೌಲ್ಯದ ಮರಳು ಜಪ್ತಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂದಿಸಿದಂತೆ ಸಂತೋಷ ಭಜಂತ್ರಿ ಎಂಬಾತನನ್ನು ಬಂಧಿಸಲಾಗಿದೆ. ನವಲಗುಂದ ರೋಡ್‌ನ ರೈಲ್ವೆ ಬ್ರಿಡ್ಜ್ ಹತ್ತಿರ ಕುಸುಗಲ್ ಕಡೆಯಿಂದ ಹುಬ್ಬಳ್ಳಿಗೆ ಸಾಗಣೆ ಮಾಡುತ್ತಿದ್ದಾಗ ಮರಳು ವಶಕ್ಕೆ ಪಡೆಯಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.