

ಕೊಕಟನೂರ: ಅಥಣಿ ತಾಲೂಕಿನ ಶಿವನೂರ ಗ್ರಾಮ ವ್ಯಾಪ್ತಿಯ ಅಗ್ರಾಣಿ ನದಿ ದಡದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ವೇಳೆ ಅಥಣಿ ಪೊಲೀಸರು ಮಂಗಳವಾರ ದಾಳಿ ನಡೆಸಿ ಜೆಸಿಬಿ ಚಾಲಕನನ್ನು ಬಂಧಿಸಿದ್ದಾರೆ. ಅಲ್ಲದೆ, ಒಂದು ಜೆಸಿಬಿ, ಒಂದು ಟಿಪ್ಪರ್ ವಶಪಡಿಸಿಕೊಂಡಿದ್ದಾರೆ. ಮಾಯಾನಟ್ಟಿಯ ವಿಠ್ಠಲ ಕೋಟೆ ಬಂಧಿತ.
ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಚಾಲಕನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.