ಕಾನೂನು ತೊಡಕು ನಿವಾರಿಸಿ ಮರಳುಗಾರಿಕೆ ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘ ನಿರ್ಧಾರ

sand
Published on

ಮಂಗಳೂರು: ಸಾಪ್ರದಾಯಿಕ ಮರಳು ಕಾರ್ಮಿಕರು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ತೊಡಕುಗಳನ್ನು ನಿವಾರಿಸಿ ಪರವಾನಗಿ ಪಡೆದು ಮರಳುಗಾರಿಕೆ ಆರಂಭಿಸಲು ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘ ನಿರ್ಧರಿಸಿದೆ.


ನಗರದಲ್ಲಿ ಮಂಗಳವಾರ ಜಿತೇಂದ್ರ ಜೆ. ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ವಿಶೇಷ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ಮರಳು ತೆಗೆಯಲು ಅರಣ್ಯ ಇಲಾಖೆಯಿಂದ ಪರಿಸರ ಅನುಮತಿ ದೊರೆತರೂ ಕೂಡ ಸಾಗಾಟ ಪರವಾನಗಿ ಇಲ್ಲದೆ ಮರಳುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ಚರ್ಚಿಸಲಾಯಿತು.


ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಮೂರು ಜಿಲ್ಲೆಗಳ ಸಾಂಪ್ರದಾಯಿಕ ಹೊಯ್ಗೆ ದೋಣಿ ಕಾರ್ಮಿಕರು ಸಂಘಟಿತ ಹೋರಾಟ ನಡೆಸುವುದಾಗಿ ಕೂಡ ತೀರ್ಮಾನಿಸಲಾಯಿತು.


ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಈಗಾಗಲೇ ಸಿಆರ್ ಝೆಡ್ ವಲಯದ ಮರಳು ದಿಬ್ಬಗಳ ಅಧ್ಯಯನ ತಜ್ಞರಿಂದ ಮಾಡಿಸಿ, ಪರಿಸರ ಅನುಮತಿಯ ಪ್ರಕ್ರಿಯೆ ನಡೆಯುತ್ತಿದ್ದರು ನಿಯಮಗಳ ತೊಡಕುಗಳಿದ್ದು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net