

ಗದಗ: ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಶಹರದ ಇರ್ಫಾನ್ ಮಲೀಕಸಾಬ ತಹಶೀಲ್ದಾರ ವಯಸ್ಸು 31 ವರ್ಷ, ಜಾತಿ: ಮುಸ್ಲಿಂ, ಉದ್ಯೋಗ ಅಟೋ ಚಾಲಕ ಗಡ್ಡಯ್ಯನಗರ ಈತನು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರಿಂದ ಐಪಿಸಿ ಮತ್ತು ಪಿಎಎನ್‍ಎಸ್‍ಸಿ/ ಎಸ್.ಟಿ ಆ್ಯಕ್ಟ್ -1989 ಮತ್ತು ಪಿಡಿಪಿಪಿ ಆ್ಯಕ್ಟ್ ಹಾಗೂ ಐ.ಟಿ. ಕೆಪಿಆ್ಯಕ್ಟ್ ಮತ್ತು ಸಿಆರ್‍ಪಿಸಿ ಅಡಿಯಲ್ಲಿ ಅಪರಾಧ ಮಾಡುವಲ್ಲಿ ತೊಡಗಿದ್ದು ಹಾಗೂ ಇದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ಸಂಭವ ಇದೆಯೆಂದು ವಿಚಾರಣೆ ಕಾಲಕ್ಕೆ ಸಾಬೀತಾಗಿರುವುದರಿಂದ ಸದರಿ ಆರೋಪಿಯನ್ನು ಗದಗ ಉಪವಿಭಾಗದ ಸರಹದ್ದಿನಿಂದ ಮೇ 31 ರಿಂದ ಜೂನ್ 14 ( 15 ದಿನಗಳ ಅವಧಿಗೆ) ಕಲ್ಬುರ್ಗಿ ಜಿಲ್ಲೆಯ ಫರಹತಾಬಾದ್ ಪೊಲೀಸ ಠಾಣೆಯಲ್ಲಿ ಹಾಜರಿ ಹಾಕುವ ಷರತ್ತಿಗೊಳಪಟ್ಟು ) ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ಡಾ.ಎಸ್.ವೆಂಕಟೇಶ ನಾಯ್ಕ್ ಅವರು ಆದೇಶಿಸಿದ್ದಾರೆ