ಕಾಂತರಬೆಟ್ಟಲ್ಲಿ ಮರಳು ದಾಸ್ತಾನು ಪತ್ತೆ

Published on

ಬೆಳ್ತಂಗಡಿ: ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ 1.70 ಲಕ್ಷ ರೂ. ಮೌಲ್ಯದ ಮರಳನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು ಪ್ರಕರಣ ದಾಖಲಿಸಿದ್ದಾರೆ. ಕಾಂತರಬೆಟ್ಟು ನಿವಾಸಿ ಸುಕೀತ್ ಎಂಬಾತ ಅಕ್ರಮ ಮರಳುಗಣಿಗಾರಿಕೆ ನಡೆಸಿ ಮರಳನ್ನು ಶೇಖರಿಸಿಟ್ಟಿದ್ದನು. ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸರು ದಾಳಿ ನಡೆಸಿದ್ದು, ತೋಟದ ನಡುವೆ ಯಾವುದೇ ಪರವಾನಗಿಯಿಲ್ಲದೆ ಶೇಖರಿಸಿಟ್ಟಿದ್ದ 150ರಿಂದ 170 ಟನ್ ಮರಳನ್ನು ಪತ್ತೆಹಚ್ಚಿದ್ದಾರೆ. ಮಳೆಗಾಲಕ್ಕಿಂತ ಮೊದಲು ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಇಲ್ಲಿ ಶೇಖರಿಸಲಾಗಿತ್ತು. ಸುಕೀತ್ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net