

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಮಠದ ತೋಟದಲ್ಲಿ ಶ್ರಾವಣ ಮಾಸದ ಅಂಗವಾಗಿ ಶನಿವಾರದಂದು ಬಿಲ್ವ ಪತ್ರಿಗಳ 10 ಸಸಿಗಳನ್ನು ನೆಡಲಾಯಿತು.
ಶ್ರೀಮಠದ ಧರ್ಮದರ್ಶಿ ಹಾಗೂ ವನ ಮಹೋತ್ಸವದ ಅಧ್ಯಕ್ಷ ಉದಯಕುಮಾರ ನಾಯ್ಕ ಅವರ ನೇತೃತ್ವದಲ್ಲಿ ಪೂಜೆ ನಡೆಸಿ, ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉದಯಕುಮಾರ ನಾಯ್ಕ, ಬಿಲ್ವ ಪತ್ರಿ ಶಿವನಿಗೆ ಅತಿ ಪ್ರೀಯವಾದದ್ದು. ಧಾರ್ವಿುಕ ಭಕ್ತಿ ಕಾರ್ಯದಲ್ಲಿ ಬಿಲ್ವ ಪತ್ರಿಗೆ ತನ್ನದೇ ಆದ ಪಾವಿತ್ರತೆ ಇದೆ. ಭಕ್ತರು ಶ್ರೀಮಠದಲ್ಲಿ ನಿತ್ಯ ಪೂಜೆಗೆ ಬಿಲ್ವಪತ್ರೆ ತಂದು, ಶ್ರೀ ಸಿದ್ಧಾರೂಢರಿಗೆ ಅರ್ಪಿಸುತ್ತಾರೆ ಎಂದರು.
ಶ್ರೀ ಮಠದ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ವಸಂತ ಸಾಲಗಟ್ಟಿ, ಬಾಳು ಮಗಜಿಕೊಂಡಿ, ರಮೇಶ ಬೆಳಗಾವಿ, ವಿನಾಯಕ ಘೊಡ್ಕೆ, ಗೀತಾ ಕಲಬುರ್ಗಿ, ಮ್ಯಾನೇಜರ್ ಈರಣ್ಣ ತುಪ್ಪದ, ಶ್ರೀಮಠದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.