

ಬೆಳ್ತಂಗಡಿ: ಕಡುಬಡತನದಲ್ಲಿರುವ ಕಳೆಂಜ ಗ್ರಾಮದ ಮಾಪಳದಡ್ಡ ಚಂದ್ರಾವತಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಿಂಗಳಿಗೆ 1 ಸಾವಿರ ರೂ. ಮಾಸಾಶನವನ್ನು ಡಾ.ವೀರೇಂದ್ರ ಹೆಗ್ಗಡೆ ಮಂಜೂರು ಮಾಡಿದ್ದಾರೆ.
ಕೇದಗೆಡದಿ ಎಂಬಲ್ಲಿನ ಜಯಶ್ರೀ ಅವರು ಹುಟ್ಟಿನಿಂದಲೇ ಬುದ್ಧಿಮಾಂದ್ಯರಾಗಿದ್ದು, ಅವರಿಗೂ ಕ್ಷೇತ್ರದಿಂದ 1 ಸಾವಿರ ರೂ. ಮಾಸಾಶನವನ್ನು ಮಂಜೂರು ಮಾಡಲಾಗಿದೆ.
ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷೆ ಸವಿತಾ ವಿತರಿಸಿದರು. ವಲಯ ಮೇಲ್ವಿಚಾರಕ ರವೀಂದ್ರ ಬಿ, ಕಳೆಂಜ ಬಿ. ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಭವಾನಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.