ಭಗವಂತನಿಗೆ ಪ್ರಿಯ ಕೆಲಸ ವಿದ್ಯಾದಾನ : ಯೋಜನಾಧಿಕಾರಿ ರಮೇಶ್ ಹೇಳಿಕೆ

New Project (6)
Published on

ಬಂಟ್ವಾಳ: ವಿದ್ಯಾದಾನವು ದೇವರಿಗೆ ಪ್ರಿಯವಾದ ಕೆಲಸ. ಪ್ರಸಾದ ರೂಪದಲ್ಲಿ ಏನೇ ಸಿಕ್ಕರೂ ಅದರ ಹತ್ತು ಪಾಲುಗಳಷ್ಟು ಪರಿಶ್ರಮರಹಿತ ಫಲ ಸಿಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಹೇಳಿದರು.

ವೀರಕಂಭ ಗ್ರಾಮದ ಮಜಿ ಸರ್ಕಾರಿ ಪ್ರಾಥಮಿಕ ಶಾಲಾ ಶೌಚಗೃಹ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ ಮಾಡಿ ಮಾತನಾಡಿದರು.

ಮಜಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವನಿತಾ, ಮುಖ್ಯಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ, ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ವೀರಕಂಭ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಒಕ್ಕೂಟ ಸೇವಾ ಪ್ರತಿನಿಧಿ ವಿಜಯ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಚಿನ್ನಾ ಕಲ್ಲಡ್ಕ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಇಂದು ಶೇಖರ್, ಶಿಕ್ಷಕಿಯರಾದ ಶಕುಂತಲಾ, ಸಂಗೀತ ಶರ್ಮ, ಮಮತಾ, ಅನುಷಾ, ಮುರ್ಷಿದಾ, ಸಂಪ್ರಿಯ, ಜಯಲಕ್ಷ್ಮೀ, ಭವ್ಯಾ, ಹರಿಣಾಕ್ಷಿ, ಹೇಮಲತಾ, ಪಲ್ಲವಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net