

ಮುಂಡಗೋಡ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತಾಲೂಕಿನ ಸನವಳ್ಳಿ ಜಲಾಶಯ ಮಂಗಳವಾರ ಬೆಳಗ್ಗೆ ಭರ್ತಿಯಾಗಿ ಕೊಡಿ ಹರಿಯುತ್ತಿದ್ದು ಕಂಡು ಪಟ್ಟಣದ ಜನತೆ ಸಂತಸ ವ್ಯಕ್ತ ಪಡಿಸಿದ್ದಾರೆ.
ತಾಲೂಕಿನ ಸನವಳ್ಳಿ ಗ್ರಾಮದ ಬಳಿ ಮುಂಡಗೋಡ ಬಂಕಾಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಸನವಳ್ಳಿ ಜಲಾಶಯದಿಂದ ವರ್ಷವಿಡಿ ಮುಂಡಗೋಡ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಅದರಂತೆ ಜಲಾಶಯದ ಕೆಳಭಾಗದ ನೂರಾರು ರೈತರು ಜಲಾಶಯದ ನೀರಿನಿಂದ ಬೇಸಿಗೆ ಬೆಳೆ ಬೆಳೆಯುತ್ತಾರೆ ಇದೀಗ ಜಲಾಶಯ ಭರ್ತಿಯಾಗಿ ಕೊಡಿ ಹರಿಯುತ್ತಿರುವುದು ರೈತರಿಗೆ ಹಾಗೂ ಪಟ್ಟಣದ ಜನತೆಯಲ್ಲಿ ಸಂತಸವುಂಟುಮಾಡಿದೆ.