ಸರ್ವಧರ್ಮಗಳ ಸಮನ್ವಯ ಸನಾತನ ಧರ್ಮ

Purana Mangala Programme
Published on

ಬ್ಯಾಡಗಿ: ಭಾರತೀಯ ಸನಾತನ ಧರ್ಮ ವಿಶ್ವಕ್ಕೆ ಮಾದರಿಯಾಗಿದ್ದು, ಸರ್ವಧರ್ಮಗಳ ಸಂಗಮವಾಗಿ ವಿವಿಧ ಸಂಸ್ಕೃತಿ, ಆಚರಣೆಗಳನ್ನು ಒಳಗೊಂಡಿದೆ ಎಂದು ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ತಿಳಿಸಿದರು.

ಪಟ್ಟಣದ ಮುಪ್ಪಿನಸ್ವಾಮಿ ಸಭಾಭವನದಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ಮುಪ್ಪಿನೇಂದ್ರ ಶ್ರೀಗಳ ಹಾಗೂ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಶ್ರಾವಣ ಮಾಸದ ಜೀವನದರ್ಶನ ಕಾರ್ಯಕ್ರಮದ ಮಂಗಲೋತ್ಸವ ಉದ್ದೇಶಿಸಿ ಮಾತನಾಡಿದರು.

ಶ್ರಾವಣ ಮಾಸ ಹಿಂದು ಧರ್ವಿುಯರಿಗೆ ಹೆಚ್ಚು ಮಹತ್ವವಾಗಿದ್ದು, ಧರ್ಮ ಕಾರ್ಯಗಳಿಗೆ ಶ್ರೇಷ್ಠ ದಿನವಾಗಿವೆ. ಪ್ರತಿಯೊಬ್ಬರೂ ಧಾರ್ವಿುಕ ಕೇಂದ್ರ, ಮಠ, ಮಂದಿರಗಳತ್ತ ತೆರಳಿ ಪುರಾಣ ಪ್ರವಚನಗಳನ್ನು ಆಲಿಸಿ, ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು.

ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಯುವಕರು ಗುಟ್ಖಾ, ಮೋಜುಗಳಿಂದ ದೂರ ಉಳಿಯಬೇಕು. ಕುಡಿತಕ್ಕೆ ದಾಸರಾಗುವ ಮೂಲಕ ಸನಾತನ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಮೂಲ ಪರಂಪರೆ ನಾಶ ಮಾಡಿದರೆ, ಸಮಾಜ ಅಧೋಗತಿಗೆ ಸಿಲುಕಲಿದೆ. ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ಪುರಸಭೆ ಸದಸ್ಯೆ ಕವಿತಾ ಸೊಪ್ಪಿನಮಠ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಫ್. ಕರೆಣ್ಣನವರ, ಮಾಜಿ ಸೈನಿಕ ರಾಜಣ್ಣ ಹೊಸಳ್ಳಿ, ಉಮೇಶ ಸಂಕಣ್ಣನವರ, ಬಸವರಾಜ ಕಾಯಕದ, ಗಿರೀಶ ಇಂಡಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net