

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಯಾರು ಎಷ್ಟೇ ಪ್ರಯತ್ನಿಸಿದರು ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ, ಆಧ್ಯಾತ್ಮಿಕವಾಗಿ ಪ್ರಾಧಾನ್ಯ ಪಡೆದಿರುವುದು ಹಿಂದು ಧರ್ಮ ಮಾತ್ರ ಎಂದು ಹಿಂದು ರಾಷ್ಟ್ರ ಜಾಗೃತಿ ಸಮಿತಿಯ ಸದಸ್ಯೆ ಅಶ್ವಿನಿ ನಾಯಕ್ ಹೇಳಿದರು. ಭಾನುವಾರ ರೆಖ್ಯ ಗ್ರಾಮದ ಗುಡ್ರಾದಿಯಲ್ಲಿ ಹಿಂದು ರಾಷ್ಟ್ರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ವಕೀಲ ಈಶ್ವರ ಕೊಠಾರಿ ಮಂಗಳೂರು ಮಾತನಾಡಿ, ಪ್ರತಿಯೊಂದು ಜೀವಿಯನ್ನೂ ಕೂಡ ಪೂಜಿಸಲ್ಪಡುವ ಸಂಸ್ಕೃತಿ ಹಿಂದು ಧರ್ಮದಲ್ಲಿ ಮಾತ್ರ ಇದೆ. ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ನಮ್ಮ ಧರ್ಮದ ಆಪಾಲಕರು ಪೋಷಕರ ಜಾಗೃತಗೊಳಿಸಬೇಕು ಎಂದರು.
ಹಿಂದು ರಾಷ್ಟ್ರ ಜಾಗೃತಿ ಸಮಿತಿಯ ದ. ಕ. ಜಿಲ್ಲಾ ಸಮನ್ವಯಧಿಕಾರಿ ಚಂದ್ರ ಮೊಗವೀರ್ ಮಾತನಾಡಿದರು. ಹಿಂದುತ್ವಕ್ಕಾಗಿ ಕಾರ್ಯ ನಿರ್ವಹಿಸಿದ ಕೈಕುರೆ ಮಂಜುನಾಥ್ ಗೌಡ ಹಾಗೂ ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯರವರನ್ನು ಸನ್ಮಾನಿಸಲಾಯಿತು.
ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಸಾಲ್ಯಾನ್, ಶಿಶಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀನ್ ಡಿ, ಅರಸಿನಮಕ್ಕಿ ಪಂಚಾಯಿತಿ ನಿಕಟ ಪೂರ್ವಧ್ಯಕ್ಷ ನವೀನ್ ರೆಖ್ಯ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ಕರುಣಾಕರ ಶಿಶಿಲ, ಗಣೇಶ್ ಕೆ ಹೊಸ್ತೋಟ, ಸಿಎ ಬ್ಯಾಂಕ್ ನಿರ್ದೇಶಕ ಬೇಬಿ ಕಿರಣ್ ಉಪಸ್ಥಿತರಿದ್ದರು.
ಸ್ವಾಗತ ಮತ್ತು ನಿರೂಪಣೆಯನ್ನು ಮಾಧವಿ ಪೈ, ಶಂಖನಾದವನ್ನು ಶಶಿಧರ್ ಮಾಕಳ, ಕರುಣಾಕರ್ ಅಭ್ಯಂಕರ್ ವೇದಮಂತ್ರ ಪಠಣ ಮಾಡಿದರು. ಸಮಿತಿಯ ಪರಿಚಯವನ್ನು ಹರೀಶ್ ಬೆಳಾಲು ನಿರ್ವಹಿಸಿದರು. ಪ್ರಶಾಂತ್ ವಂದಿಸಿದರು.