ಸನಾತನ ಸಂಸ್ಕೃತಿ ವಿಶ್ವಕ್ಕೆ ಮಾದರಿ

24Chikodigramin1
ಯಕ್ಸಂಬಾ ಪಟ್ಟಣದಲ್ಲಿ ನಾಯಿಕಬಾ ದೇವಸ್ಥಾನದ ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು. ಪಂಡಿತ ಅನ್ನದಾನ ಶಾಸಿ, ಮಾರುತಿ ಮಾನೆ, ಎ.ಡಿ.ಇಂಗಳೆ, ಎ.ಎ.ಇಂಗಳೆ, ರಾಜು ಬಾಕಳೆ, ಮಾರುತಿ ಪೂಜಾರಿ, ಸುಶಾಂತ ಹಿರೇಮಠ ಇತರರು ಇದ್ದರು.
Published on

ಚಿಕ್ಕೋಡಿ ಗ್ರಾಮಿಣ: ಮಠ-ಮಂದಿರಗಳು ಭಾರತೀಯ ಸಂಸ್ಕೃತಿಯ ದ್ಯೋತಕವಾಗಿದ್ದು, ಸನಾತನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪ್ರಯತ್ನಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಯಿಕಬಾ ನೂತನ ದೇವಸ್ಥಾನದ ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ನಿಡಸೋಸಿ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸನಾತನ ಪರಂಪರೆಯ ಮಠ-ಮಂದಿರಗಳಿಗೆ ತನ್ನದೆಯಾದ ವೈಶಿಷ್ಟೃವಿದ್ದು, ಧಾರ್ಮಿಕ ವಿಧಿ-ವಿಧಾನಗಳಿಗೆ ವೈಜ್ಞಾನಿಕ ಕಾರಣವಿದೆ. ಧನಾತ್ಮಕ ವಿಚಾರಗಳು ನಡೆಯುವ ಕೇಂದ್ರಗಳೇ ನಮ್ಮ ದೇವಸ್ಥಾನಗಳು. ದೇವಸ್ಥಾನಗಳು ಜನರಿಗೆ ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು ಎಂದರು.

ಗೂಡೂರಿನ ಪಂಡಿತ ಅನ್ನದಾನ ಶಾಸಿಗಳಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ನೂಲದ ಗುರುಸಿದ್ಧೇೀಶ್ವರ ಶಿವಾಚಾರ್ಯ ಸ್ವಾಮೀಜಿ 200 ಭಕ್ತರಿಗೆ ಲಿಂಗದೀಕ್ಷೆ ನೀಡಿದರು. ಮಲಿಕವಾಡದ ಶವಶಕ್ತಿ ಭಜನಾ ಮಂಡಳದಿಂದ ಭಜನೆ ಹಾಗೂ ಸಂತೋಷ ಡವರಿ ಅವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ಜರುಗಿತು. ಭೂದಾನಿ ನಾಯಿಕಬಾ ದೇವಸ್ಥಾನ ಕಮಿಟಿ ಅಧ್ಯಕ್ಷ ಮಾರುತಿ ಮಾನೆ, ದೇವರಿಗೆ ಸೇವೆ ಸಲ್ಲಿಸಿದ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.
ಚಿಕ್ಕೋಡಿಯ ಸಂಪಾದನ ಸ್ವಾಮೀಜಿ, ಮಲಿಕವಾಡ ಸರಸ್ವತಿ ಸೊಸೈಟಿ ಅಧ್ಯಕ್ಷ ಎ.ಡಿ.ಇಂಗಳೆ, ಚಿದಾನಂದ ಬಸಪ್ರಭು ಕೋರೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಎ.ಎ.ಇಂಗಳೆ, ರಾಜು ಬಾಕಳೆ, ಮಾರುತಿ ಪೂಜಾರಿ, ಸುಶಾಂತ ಹಿರೇಮಠ, ಅಶೋಕ ಹಿರೇಮಠ, ದಯಾನಂದ ಮಂಗಸೂಳೆ, ಎಸ್.ಎಂ.ಸಾತವರ, ಕೃಷ್ಣ ಮಾಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net